ಹೈದರಾಬಾದ್: ಟಾಲಿವುಡ್ ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಅವರ ವಿವಾಹ ನಿಶ್ಚಿತಾರ್ಥ ಭಾನುವಾರ ನೆರವೇರಿದೆ. ನಾಗ ಚೈತನ್ಯ–ಸಮಂತಾ ಜೋಡಿ ಹಲವು ದಿನಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಇವರಿಬ್ಬರ ಮದುವೆಗೆ ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ಇಂದು ನಿಶ್ಚಿತಾರ್ಥ ನೇರವೇರಿದೆ.
ನಾಗಚೈತನ್ಯ- ಸಮಂತಾರ ಎಂಗೇಜ್ಮೆಂಟ್ ಹಿಂದು, ಕ್ರೈಸ್ತ ಸಂಪ್ರದಾಯಗಳ ಅನ್ವಯ ನೆರವೇರಿದ್ದು ವಿಶೇಷ. ನಾಗಚೈತನ್ಯ ಸಮಂತಾಗೆ ಉಂಗುರ ತೊಡಿಸಿ ಚುಂಬಿಸಿದ್ದು ಗಮನ ಸೆಳೆಯಿತು. ಎಂಗೇಜ್ಮೆಂಟ್ ನೆರವೇರುತ್ತಿದ್ದಂತೆ ನಾಗಾರ್ಜುನ ‘ ನನ್ನ ತಾಯಿ ಈಗ ಮಗಳಾಗಿದ್ದಾಳೆ. ಇದಕ್ಕಿಂತ ಸಂತೋಷ ಮತ್ತಿನೇನಿದೆ’ ಅಂತಾ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಸಮಂತಾ ಮನಂ’ ಚಿತ್ರದಲ್ಲಿ ನಾಗಾರ್ಜುನ್ಗೆ ತಾಯಿಯಾಗಿ ನಟಿಸಿದ ಹಿನ್ನೆಲೆಯಲ್ಲಿ ನಾಗ್ ಹೀಗೆ ಟ್ವೀಟ್ ಮಾಡಿದ್ದಾರೆ.