ಬೆಂಗಳೂರು: ಲಾರಿ ಚಾಲಕನ ಅಜಾಗರೂಕ ಚಾಲನೆಯಿಂದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಪುಟಾಣಿ ಸಮನ್ವಿ(6) ಇನ್ನಿಲ್ಲವಾಗಿದ್ದಾಳೆ. ಖ್ಯಾತ ನಿರೂಪಕಿ ಅಮೃತಾ ನಾಯ್ಡು ತೀವ್ರವಾಗಿ ಗಾಯಗೊಂಡಿದ್ದರೇ, ಅವರೊಂದಿಗೆ ತೆರಳುತ್ತಿದ್ದಂತ ಪುತ್ರಿ ಸಮನ್ವಿಗೆ ತೀವ್ರವಾಗಿ ಗಾಯವಾಗಿತ್ತು.ಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.
ಹೌದು..ನಿನ್ನೆ ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ಓವರ್ ಟೆಕ್ ಮಾಡುವಾಗ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ, ರಸ್ತೆಗೆ ಬಿದ್ದಂತ. ಸ್ಥಳೀಯರು ಆಕೆಯ್ನು ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿ, ಇನ್ನಿಲ್ಲವಾಗಿದ್ದಾಳೆ.
ಅಂದಹಾಗೇ ಅಮೃತಾ ನಾಯ್ಡು ಅವರು ಗುರುವಾರ ಸಂಜೆ 4.30ರಲ್ಲಿ ಸ್ಕೂಟರ್ ನಲ್ಲಿ ಮಗಳನ್ನು ಹಿಂದೆ ಕೂರಿಸಿಕೊಂಡು, ವಾಜರಹಳ್ಳಿ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ವಾಜರಹಳ್ಳಿ ಮುಖ್ಯರಸ್ತೆಯ ನಿಕೇತ್ ಸೀಸರ್ ಅಪಾರ್ಮೆಂಟ್ ಬಳಿ ವೇಗವಾಗಿ ಬಂದ ಟಿಪ್ಪರ್ ಲಾರಿ, ಓವರ್ ಟೇಕ್ ಮಾಡುವಾಗ ಏಕಾಏಕಿ ಲಾರಿಯ ಎಡಭಾಗ ಸ್ಕೂಟಿಗೆ ತಾಗಿತ್ತು. ಇದರಿಂದಾಗಿ ಸ್ಕೂಟರ್ ಚಲಾಯಿಸುತ್ತಿದ್ದಂತ ಅಮೃತ ಹಾಗೂ ಅವರ ಪುತ್ರಿ ಸಮನ್ವಿ ರಸ್ತೆಗೆ ಬಿದ್ದಿದ್ದರು. ಪುತ್ರಿ ಸಮನ್ವಿ ಸಾವನ್ನಪ್ಪಿದ್ದರೇ, ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.