ಬೆಂಗಳೂರು: ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಭಾ.ಮಾ.ಹರೀಶ್ ಆಯ್ಕೆಯಾಗಿದ್ದಾರೆ. ಭಾ.ಮಾ. ಹರೀಶ್ 410 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಭಾ.ಮಾ.ಹರೀಶ್ 781 ಮತಗಳನ್ನು ಪಡೆದರೆ, ಸಾ.ರಾ.ಗೋವಿಂದು 371 ಮತಗಳನ್ನು ಪಡೆದಿದ್ದಾರೆ. ಕರ್ನಾಟಕ ಫಿಲ್ಮ್ ಚೇಂಬರ್ ಉಪಾಧ್ಯಕ್ಷರಾಗಿ ಜೈಜಗದೀಶ್ ಆಯ್ಕೆಯಾದರೆ, ಕರ್ನಾಟಕ ಫಿಲ್ಮ್ ಚೇಂಬರ್ ಖಜಾಂಚಿಯಾಗಿ ಟಿ.ಪಿ. ಸಿದ್ದರಾಜು ಆಯ್ಕೆಯಾಗಿದ್ದಾರೆ.