Categories: ಮನರಂಜನೆ

ಅಭಿಮಾನಿಗಳ ದೇವ್ರು ದೊಡ್ಮನೆ ಹುಡ್ಗ

ಒಬ್ಬ ಸ್ಟಾರ್ ನಿರ್ದೇಶಕ, ಒಬ್ಬ ಸ್ಟಾರ್ ನಟ ಮತ್ತೊಂದು ಸ್ಟಾರ್ ತಂಡ ಸೇರಿ ಮಾಡಿದ ಸಿನೆಮಾದ ಮೇಲೆ ನಿರೀಕ್ಷಗಳು ಹುಟ್ಟುವುದು ಸಹಜ. ಆದರೆ ದೊಡ್ಮನೆ ಹುಡ್ಗ  ನಿರೀಕ್ಷಿಸಿದ ಮಟ್ಟಿಗೆ ಅದ್ಭುತ ಸಿನೆಮಾವಾಗದೆ ಅಭಿಮಾನಿಗಳಿಗಾಗೇ ಮಾಡಿದ ಮಾಮೂಲಿ ಕಮರ್ಷಿಯಲ್ ಸಿನೆಮಾವಾಗಿದೆ. ಒಂದಷ್ಟು ಮೈನವಿರೇಳಿಸುವ ಹೊಡೆದಾಟಗಳು, ಕಚಗುಳಿಯಿಡುವ ಸಂಭಾಷಣೆಗಳ ಜೊತೆ ಪವರ್ ಸ್ಟಾರ್ ಎಂದಿನಂತೆ ಪವರ್ ಫುಲ್ ಆಗಿದ್ದರೆ, ರೆಬೆಲ್ ಸ್ಟಾರ್ ಹಳ್ಳಿಗರಿಗೆ ದಾನಶೂರ ಕರ್ಣನಾಗಿ, ದುಷ್ಟರಿಗೆ ಬಲಭೀಮನಾಗಿ ಮೆರೆದಿದ್ದಾರೆ.

ರಾಕಿಂಗ್ ಕ್ವೀನ್ ರಾಧಿಕಾ ಎಂದಿಗಿಂತ ಮುದ್ದಾಗಿ ಕಾಣಿಸಿ ನಶೆಯೇರಿಸುತ್ತಾರೆ. ಅರ್ಮುಗಂ ರವಿಶಂಕರ್ ಅಬ್ಬರ ಚಿತ್ರವನ್ನು ಜೀವಂತವಿರಿಸಿದರೆ, ದ್ವಿತಿಯಾರ್ಧದಲ್ಲಿ ಬರುವ ಚಿಕ್ಕಣ್ಣ ಸಣ್ಣ ಪಾತ್ರದಲ್ಲೇ ಮಿಂಚಿದ್ದಾರೆ. ಉಳಿದಂತೆ ಭಾರತೀ ವಿಷ್ಣುವರ್ಧನ್, ಸುಮಲತಾ, ಡಾರ್ಲಿಂಗ್ ಕೃಷ್ಣ,ರಂಗಾಯಣ ರಘು,ಶ್ರೀನಿವಾಸ್ ಮೂರ್ತಿ, ಬಿ ಸುರೇಶ್ ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಸೂರಿ ಶೈಲಿಯ ಸಿನೆಮಾಗಳನ್ನು ಬಯಸುವವರಿಗೆ ದೊಡ್ಮನೆ ಹುಡ್ಗ ನೀರಸವೆನಿಸಿದರೂ ಪವರ್ ಸ್ಟಾರ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನೆಮಾ. ನಿರ್ದೇಶಕರು ಅಪ್ಪು ಮತ್ತು ಅಂಬಿಯವರ ಪಾತ್ರವನ್ನು ಕಟ್ಟುವ ಭರದಲ್ಲಿ ನಾಯಕಿ ಪಾತ್ರವನ್ನು ಎಲ್ಲೋ ಕಡೆಗಣಿಸಿದಂತೆ ಕಾಣಿಸುತ್ತದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ತಾವು ಹಾಡುವುದನ್ನು ಬಿಟ್ಟು ವೃತ್ತಿಪರ ಗಾಯಕರಿಗೆ ಅಥವಾ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದರೆ ಕೇಳುಗನ ಕಿವಿ ತಮಟೆಗಾದರೂ ನೆಮ್ಮದಿ ಸಿಗುತ್ತಿತ್ತು. ಎಂ.ಗೋವಿಂದ ಅವರ ನಿರ್ಮಾಣದ ದೊಡ್ಮನೆ ಹುಡ್ಗ ಒಮ್ಮೆ ನೋಡಲಡ್ಡಿಯಿಲ್ಲ. ಮನರಂಜನೆಗೆ ಮೋಸವಿಲ್ಲ.    

 

Desk

Recent Posts

ಹೆಲಿಕಾಪ್ಟರ್ ಪತನ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

 ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಭಾನುವಾರದಿಂದ ನಡೆಯುತ್ತಿದ್ದ ಗಂಟೆಗಳ ಕಾರ್ಯಾಚರಣೆ…

2 mins ago

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

18 mins ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

36 mins ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

1 hour ago

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

1 hour ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

2 hours ago