ಮಂಗಳೂರು: ವಿಶ್ವ ತಂಬಾಕು ರಹಿತ ದಿನ -2025 ಇದರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ, ಇವರ ಸಹಯೋಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯನ್ನು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಕೆ ಎಂ ಸಿ ಯ ಆವರಣದಲ್ಲಿಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು”ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗದಂತೆ ಮಾಡುವುದೇ ಸಮುದಾಯದಲ್ಲಿ ತಂಬಾಕಿಗೆ ಸಂಬಂಧಿಸಿದ ಕ್ಯಾನ್ಸರ್‌ಗಳನ್ನು ತಡೆಯುವ ಒಂದೇ ಮಾರ್ಗವಾಗಿದೆ” ಎಂದು ಸಲಹೆ ನೀಡಿದರು.

ಸಮುದಾಯ ವೈದ್ಯಕೀಯ ವಿಭಾಗದ ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ತಂಬಾಕಿನ ಬಗ್ಗೆ ಜಾಗೃತಿ ಮೂಡಿಸುವಂತಹ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು ಈ ಕಲಾಕೃತಿಯಲ್ಲಿ – ತಂಬಾಕಿನ ಸೇವನೆಯಿಂದ ಹಾನಿಗೊಳಗಾದ ಶ್ವಾಸಕೋಶ್ವವನ್ನು ಆಕರ್ಷಕವಾಗಿ ಬಿಂಬಿಸಲಾಗಿದೆ. ಮತ್ತು ತಂಬಾಕು ಉದ್ಯಮವು ಯಾವ ರೀತಿ ತನ್ನ ಆಮಿಷಕ್ಕೆ ಒಳಪಡಿಸುತ್ತಿದೆ ಎಂಬುದನ್ನು ಭಯಾನಕವಾಗಿ ಬಿಂಬಿಸಲಾಗಿದೆ.

ತAಬಾಕಿನ ಸೇವನೆಯಿಂದ, ಜಗಿಯುವುದರಿಂದ ಬಾಯಿಯ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಶ್ವಾಶಕೋಶದ ಕ್ಯಾನ್ಸರ್,ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ತಾಂಬಾಕಿನ ಸೇವನೆಯಿಂದಾಗಿ ಪ್ರತಿವರ್ಷ 8 ಮಿಲಿಯನ್ ಜನರು ಸಾವನ್ನಪ್ಪುತ್ತಿರುವುದು ದುಖ:ಕರ ವಿಷಯವಾಗಿದೆ. ಕಲಾಕೃತಿಯನ್ನು ಒಂದು ವಾರಗಳ ಕಾಲ ಮಣಿಪಾಲ ಮತ್ತು ಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾವುದು ಎಂದು ಕಲಾವಿದರು ತಿಳಿಸಿದ್ದಾರೆ.