ಮಂಗಳೂರು: ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಮಂಗಳೂರಿನಲ್ಲಿ ಹೃದಯ ಆರೋಗ್ಯ ಜಾಗೃತಿ ಕಾರ್ಯಕ್ರಮ ಮತ್ತು ಹೃದಯ ಸ್ತಂಭನ ಪುನಶ್ಚೇತನದ ತರಬೇತಿ ಕಾರ್ಯಕ್ರಮ ಆಯೋಜಿಸುವ ಮೂಲಕ 2026 ರ ವಿಶ್ವ ಹೃದಯ ದಿನವನ್ನು ಆಚರಿಸಿತು.

ಯೆನೆಪೋಯ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ. ಅಭಯ್ ಎಸ್ ನಿರ್ಗುಡೆ ಮುಖ್ಯ ಅತಿಥಿಗಳಾಗಿದ್ದು, ವಿಶ್ವ ಹೃದಯ ದಿನಾಚರಣೆಯ ಮಹತ್ವವನ್ನು ಒತ್ತಿ ಹೇಳಿದರು.
ಹೃದಯ ಶಾಸ್ತ್ರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೃದಯ ರೋಗದ ಲಕ್ಷಣಗಳು, ಜಾಗ್ರತೆ ಮತ್ತು ವೈದ್ಯಕೀಯ ಸಮಾಲೋಚನೆಯ ಬಗ್ಗೆ ಕಿರುನಾಟಕ ಪ್ರದರ್ಶಿಸಿದರು. ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಹಬೀಬ್ ರೆಹಮಾನ್ ಎ ಎ, ಹೃದಯ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ತಿಳಿಸಿದರು.
ಅವರು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು, ನಮ್ಮ ಹೃದಯದ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವುದು ಮತ್ತು ಸಕಾರಾತ್ಮಕ ಜೀವನಶೈಲಿಯನ್ನು ರೂಡಿಸಿಕೊಳ್ಳುವ ಮೂಲಕ ಹೃದಯ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಹೃದ್ರೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಕುಮಾರ್ ಕೆ.ಪಿ. ಹೃದಯ ಆರೋಗ್ಯ, ಆರೋಗ್ಯಕರ ಜೀವನಶೈಲಿ ಅಭ್ಯಾಸಗಳು ಮತ್ತು ಹೃದಯ ತುರ್ತುಸ್ಥಿತಿಗಳ ಎಚ್ಚರಿಕೆ ಚಿಹ್ನೆಗಳು ಮತ್ತು ಸಕಾಲಿಕ ವೈದ್ಯಕೀಯ ಆರೈಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಅರಿವಳಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ, ಡಾ. ಏಜಾಜ್ ಅಹಮದ್. ಝಡ್. ಮತ್ತು ಅವರ ತಂಡವು ಪ್ರಾಯೋಗಿಕ ಸಿಪಿಆರ್ ತರಬೇತಿ ನೀಡಿದರು. ಭಾಗವಹಿಸಿದವರು ಹೃದಯ ಪುನಶ್ಚೇತನ ತಂತ್ರವನ್ನು ಮಾನವಾಕೃತಿಯಲ್ಲಿ ಪ್ರದರ್ಶಿಸಿದರು. ಮೂಲ ಸಿಪಿಆರ್ ತಂತ್ರಗಳು ಮತ್ತು ಹೃದಯ ತುರ್ತು ಸಂದರ್ಭಗಳಲ್ಲಿ ಸೂಕ್ತ ಪ್ರತಿಕ್ರಿಯೆಯ ಬಗ್ಗೆ ತರಬೇತಿ ನೀಡಲಾಯಿತು.
ಮಾರ್ಕೆಟಿಂಗ್ ವಿಭಾಗದ ಶ್ರೀ ನಿಸಾರ್ ಅಹಮದ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಅನೇಕ ವಿಧ್ಯಾರ್ಥಿಗಳು, ಬೋಧನೆ ಮತ್ತು ಬೋಧಕೇತರ ಸಿಬ್ಬಂದಿ, ರೋಗಿಗಳ ಸಹಾಯಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ಈ ಮಾಹಿತಿಯುಕ್ತ ಕಾರ್ಯಕ್ರಮದ ಪ್ರಯೋಜನಗಳನ್ನು ಪಡೆದರು. ಕಾರ್ಡಿಯೋಲಜಿ ವಿಭಾಗದ ಡಾ. ರಾಹುಲ್ ರಾಮಾನುಜಮ್, ಆಸ್ಪತೆಯ ಉಪ ಕಾರ್ಯಾಚರಣೆ ಅಧಿಕಾರಿ, ಶ್ರೀ ಮೊಹಮ್ಮದ್ ಸಾಬಿತ್, ಗುಣಮಟ್ಟ ವಿಭಾಗದ ಸಹಾಯಕ ನಿರ್ದೇಶಕಿ ಡಾ ವಿಜೇತಾ ತಿಂಗಲಾಯ, ನರ್ಸಿಂಗ್ ಸೂಪರಿಂಟೆಂಡೆಂಟ್ ಶ್ರೀಮತಿ ನೂತನ್ ಲಸ್ರಾಡೊ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಶ್ರೀ ವಿಜಯಾನಂದ ಶೆಟ್ಟಿ ಕೂಡ ಜಾಗೃತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಹೃದಯ ಆರೋಗ್ಯದ ಮಹತ್ವ, ಹೃದಯ ತುರ್ತುಸ್ಥಿತಿಗಳ ಆರಂಭಿಕ ಗುರುತಿಸುವಿಕೆ ಮತ್ತು ಹೃದಯ ಸ್ತಂಭನವಾದಾಗ ತುರ್ತು ಕೈಗೊಳ್ಳಬಹುದಾದ ವಿಷಯಗಳನ್ನು ಪ್ರಾಯೋಗಿಕವಾಗಿ ಬಳಸಿ ಸಕಾಲಿಕ ಜೀವ ಉಳಿಸುವ ಕ್ರಮವನ್ನು ತಿಳಿಯಪಡಿಸಲಾಯಿತು.

