ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)  ಮೈಸೂರು ಜಿಲ್ಲೆ, ಮೈಸೂರು ಮತ್ತು ರಾಮಕೃಷ್ಣ ವಿದ್ಯಾಕೇಂದ್ರ ಪದವಿಪೂರ್ವ  ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೈಸೂರು ನಗರ ಮತ್ತು ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸಹಪಠ್ಯ ಸ್ಪರ್ಧೆಗಳಲ್ಲಿ ವಿಜಯ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ದ್ವಿತೀಯ ಪಿಯುಸಿ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅದ್ವೆಕ್.ಕೆ.ವಿ ಮತ್ತು ವಿಶ್ರುತ್ ಎಸ್. ಪ್ರಸಾದ್ ಅವರು ದ್ವಿತೀಯ ಬಹುಮಾನ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಖುಷಿ ಆರ್ ಗೌಡ ದ್ವಿತೀಯ  ಬಹುಮಾನ ಗಳಿಸಿದ್ದಾರೆ.