ಮಂಗಳೂರು: ಯೆನೆಪೋಯಾ ವೈದ್ಯಕೀಯ ಮಹಾವಿದ್ಯಾಲಯದ ಪದವಿಪೂರ್ವ ವೈದ್ಯಕೀಯ ಸಮ್ಮೇಳನವಾದ Yencision 2026 ಅನ್ನುಕಾಲೇಜಿನ Blades and Beyond – Surgery Club ವತಿಯಿಂದ ಆಯೋಜಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ, ವೈದ್ಯಕೀಯ ಸಂಶೋಧನೆ, ಶೈಕ್ಷಣಿಕ ಚಟುವಟಿಕೆಗಳು ಹಾಗೂ ನವೀನ ಆಲೋಚನೆಗಳ ಕ್ಷೇತ್ರಗಳಲ್ಲಿ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನುಅನ್ವೇಷಿಸಲು, ಪ್ರದರ್ಶಿಸಲು ಹಾಗೂ ಅಭಿವೃದ್ಧಿ ಪಡಿಸಿಕೊಳ್ಳಲು ಒಂದು ಸಮಗ್ರ ವೇದಿಕೆಯನ್ನುಒದಗಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.

2025ರಲ್ಲಿ ನಡೆದ ಮೊದಲ ಆವೃತ್ತಿಯು ಎರಡು ದಿನಗಳ ಕಾಲ ಯಶಸ್ವಿಯಾಗಿ ಜರುಗಿದ್ದು, 250ಕ್ಕೂಹೆಚ್ಚುಪ್ರತಿನಿಧಿಗಳು ಭಾಗವಹಿಸಿದ್ದರು. ಮೊದಲ ಆವೃತ್ತಿಯ ಯಶಸ್ಸಿನ ಮುಂದುವರಿದ ಭಾಗವಾಗಿ, Yencision 2026 ಈ ಬಾರಿ ಮೂರು ದಿನಗಳ ಸಮ್ಮೇಳನವಾಗಿ ಮರಳುತ್ತಿದ್ದು, ಸುಮಾರು 400 ಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದೆ.

ಈ ಸಮ್ಮೇಳನದಲ್ಲಿ20 ಕಾರ್ಯಾಗಾರಗಳು, ಮೂರು ಮಾಸ್ಟರ್ ಕ್ಲಾಸ್ ಗಳು, ವೈಜ್ಞಾನಿಕ ಸ್ಪರ್ಧೆಗಳು, ಬಹುಹಂತದ ರಸಪ್ರಶ್ನೆ ಸ್ಪರ್ಧೆ ಹಾಗೂ Literary Club ವತಿಯಿಂದ ಆಯೋಜಿಸಲಾಗಿರುವ ಚರ್ಚಾಸ್ಪರ್ಧೆಗಳು ನಡೆಯಲಿವೆ. ಈ ವರ್ಷದ ವಿಶೇಷ ಆಕರ್ಷಣೆಗಳಾಗಿ Genesis – Research Club ವತಿಯಿಂದ Ideathon ಹಾಗೂ ಭಾಗವಹಿಸುವವರಿಗೆ ವಿಶಿಷ್ಟ ಮತ್ತುರೋಚಕ ಅನುಭವವನ್ನುಒದಗಿಸುವ Escape Room ಅನ್ನುಆಯೋಜಿಸಲಾಗಿದೆ.

ನವೆಂಬರ್ 20ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆಡಾ. ಅಬ್ಬಾಸ್ ಅಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಭಾರತದ ಪ್ರಮುಖ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷಾತರಬೇತಿ ವೇದಿಕೆಗಳಾದ Marrow ಮತ್ತುMedPG ಗಳಲ್ಲಿಪ್ರಮುಖ ಬೋಧಕರಾಗಿ ಗುರುತಿಸಿಕೊಂಡಿರುವ ಅವರು, ಆರ್ಥೋಪೆಡಿಕ್ಸ್ಬೋಧನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷಾಸಿದ್ಧತೆ ಮತ್ತುಯಶಸ್ಸಿನ ಹಾದಿಯಲ್ಲಿಮಾರ್ಗದರ್ಶನ ನೀಡಿದ್ದಾರೆ.

ಉದ್ಘಾಟನಾ ಸಮಾರಂಭವು ಪ್ರಾಂಶುಪಾಲರ ಅಧ್ಯಕ್ಷೀಯ ಭಾಷಣದೊಂದಿಗೆ ಆರಂಭವಾಗಲಿದ್ದು, ನಂತರ ವಂದನಾರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ತದನಂತರ ಡಾ. ಅಬ್ಬಾಸ್ ಅಲಿ ಅವರ ಮುಖ್ಯ ಭಾಷಣ ನಡೆಯಲಿದೆ.

ಶೈಕ್ಷಣಿಕ ಶ್ರೇಷ್ಠತೆ, ಪ್ರಾಯೋಗಿಕ ತರಬೇತಿ, ಸಂಶೋಧನೆ, ಸ್ಪರ್ಧಾತ್ಮಕತೆ ಮತ್ತುನಾವೀನ್ಯತೆಯನ್ನುಒಂದೇವೇದಿಕೆಯಲ್ಲಿಒಗ್ಗೂಡಿಸುವ Yencision 2026, ವೈದ್ಯಕೀಯ ಮತ್ತುಶಸ್ತ್ರಚಿಕಿತ್ಸಾ ಕ್ಷೇತ್ರದ ಭವಿಷ್ಯವನ್ನು ರೂಪಿಸಲಿರುವ ಯುವ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭೆ, ಕುತೂಹಲ ಹಾಗೂ ಉತ್ಸಾಹವನ್ನುಅನಾವರಣಗೊಳಿಸುವ ಸ್ಮರಣೀಯ ಮೂರು ದಿನಗಳ ಶೈಕ್ಷಣಿಕ ಪಯಣವಾಗಲಿದೆ.