ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಶೈಕ್ಷಣಿಕ ವರ್ಷ 2024 ಜನವರಿ 20 ರಂದು ನಡೆದ ಜವಾಹರ್ ನವೋದಯ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದ ವಿದ್ಯಾರ್ಥಿಗಳ ಎರಡನೇ ಹಂತದ ಆಯ್ಕೆ ಪ್ರಕ್ರೀಯೆಯಲ್ಲಿ 2 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

Logo Psc

ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿಯಾದ ಪ್ರಭುಕುಮಾರ್ ಎಸ್.ಬಿ ಹಾಗೂ ತನುಜಾ ಪಿ. ಇವರ ಪುತ್ರನಾದ ಅರುಣ್‍ಕುಮಾರ್ ಪಿ., ಬಂಕೊಳಿ ಬೆಟ್ಟಂಪಾಡಿ ಇರ್ದೆ ನಿವಾಸಿಯಾದ ರಾಜಗೋಪಾಲ್ ಹಾಗೂ ರಮ್ಯ ದಂಪತಿಗಳ ಪುತ್ರಿಯಾದ ಲಹರಿ ಭಾರದ್ವಾಜ್ ಇವರು ಆಯ್ಕೆಯಾಗಿರುತ್ತಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ಚಲಗೊಳ್ಳಲಿ ಎಂದು ಸಂಸ್ಥೆಯ ಸಂಚಾಲಕರಾದ ಶ್ರೀಯುತ ಗೋಕುಲ್‍ನಾಥ್ ಪಿ.ವಿ. ಶುಭ ಹಾರೈಸಿದರು. ಜವಾಹರ್ ನವೋದಯ ವಿದ್ಯಾಲಯದ 2024-25ನೇ ಸಾಲಿನ 6 ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ಆರಂಭಗೊಂಡಿದ್ದು ದಿನಾಂಕ 16-09-2024 ಕೊನೆಯ ದಿನವಾಗಿರುತ್ತದೆ.

ನಮ್ಮ ಸಂಸ್ಥೆಯಲ್ಲಿ ಈ ಪ್ರವೇಶ ಪರೀಕ್ಷೆಗೆ ಪೂರ್ವ ತಯಾರಿ ತರಗತಿಗಳು ಪ್ರಾರಂಭಗೊಂಡಿದ್ದು, ಪ್ರತಿ ಆದಿತ್ಯವಾರ ಬೆಳಿಗ್ಗೆ 9.30 ರಿಂದ ಸಂಜೆ 3.30ರ ವರೆಗೆ ತರಗತಿಗಳು ನಡೆಯಲಿದೆ. ಆಸಕ್ತರು ಸಂಸ್ಥೆಯ ಕಛೇರಿಯನ್ನು ಭೇಟಿ ಮಾಡಬಹುದು.