ತಿ. ನರಸೀಪುರ: ಚಿದರಹಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕ ಶಂಕರಯ್ಯ ರವರ 35 ವರ್ಷದ ಸುದೀರ್ಘ ಸೇವಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಸರ್ವಪಲ್ಲಿ ರಾಧಕೃಷ್ಣ ರವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡಿ ದೀಪ ಬೆಳಗಿದರು. ಪ್ರೌಢಶಾಲಾ ಶಿಕ್ಷಕ ಶಂಕ್ರಯ್ಯ ರವರ 35 ವರ್ಷಗಳ ಕಾಲ ಸುದೀರ್ಘ ಸೇವೆ ತುಂಬಿದ ಹಿನ್ನೆಲೆ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಶಿಕ್ಷಕ ಶಂಕರಯ್ಯರ ವತಿಯಿಂದ ಬಟ್ಟೆ ವಿತರಿಸಲಾಯಿತು. ಈ ಸಂದರ್ಭ ಗ್ರೇಸಾ ಪ್ರೇಮಕುಮಾರಿ, ಸೇರಿದಂತೆ ಸಹಶಿಕ್ಷಕರು ಇದ್ದರು.

