ಮಂಗಳೂರು : ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಯು ಎಸ್ ಎಸ್ ಐ ಮಂತ್ರ 3.0 ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಅನ್ನು ಅಳವಡಿಸಿಕೊಂಡು ರೊಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ದಾಖಲಿಸಿದೆ.
ಎಸ್ ಎಸ್ ಐ ಮಂತ್ರ 3.0 ಭಾರತದಲ್ಲೇ ನಿರ್ಮಿಸಲ್ಪಟ್ಟ, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಉಪಕರಣ ಇದರ ನಿರ್ಮಾಣ ಒಂದು ಹೆಮ್ಮೆಯ ಸಾಧನೆ ಯಾಗಿದೆ ಎಂದು ಯೆನೆಪೊಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ವಿಜಯ ಕುಮಾರ್ ಸುದ್ದಿ ಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಡಾ. ವಿನ್ನಿ ಮತ್ತು ಮಂತ್ರಾ 3.0 ಎಂಬ ಎರಡು ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳನ್ನೂ ಹೊಂದಿರುವ ದೇಶದ ಏಕೈಕ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿದೆ. ಸರ್ಕಾರಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಬಡ ರೋಗಿಗಳಿಗೆ ಉಚಿತವಾಗಿ ರೋಬೋಟಿಕ್ ಶಸ್ತ್ರಚಿಕಿತ್ಸೆ ನೀಡುವ ದೇಶದ ಏಕೈಕ ಖಾಸಗಿ ಆಸ್ಪತ್ರೆಯಾಗಿ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಗುರುತಿಸಿಕೊಂಡಿದೆ.
ಮೂತ್ರಶಾಸ್ತ್ರ ಅರ್ಬುದ ಶಸ್ತ್ರಚಿಕಿತ್ಸಾ ಸ್ತ್ರೀರೋಗ ಶಾಸ್ತ್ರ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಮಂತ್ರ 3.0 ಅನ್ನು ಬಳಸಿಕೊಂಡು ಸುಮಾರು 100 ಕಾರ್ಯವಿಧಾನಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.ಮಂತ್ರಾ 2.0 ನ ಸುಧಾರಿತ ಆವೃತ್ತಿಯಾದ ಮಂತ್ರಾ 3.0, ಮುಂದಿನ ತಲೆಮಾರಿನ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಪ್ರತಿಬಿಂಬಿಸುತ್ತದೆ. ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳ ಭಾಗದಲ್ಲಿ 2016 ರಲ್ಲಿ ಡಾ ವಿನ್ಸಿ ಸರ್ಜಿಕಲ್ ಸಿಸ್ಟಮ್ ನೊಂದಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿದಂತಹ ಸಂಸ್ಥೆಯಾಗಿದೆ.
2016ರಿಂದ, ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಮೂತ್ರಶಾಸ್ತ್ರ ಅರ್ಬುದ ಶಸ್ತ್ರಚಿಕಿತ್ಸೆ ಮತ್ತು ಸ್ತ್ರೀರೋಗ ಶಾಸ್ತ್ರಗಳಲ್ಲಿ 1,000 ಕ್ಕೂ ಹೆಚ್ಚು ರೋಬೋಟಿಕ್ ಕಾರ್ಯವಿಧಾನಗಳನ್ನು ಸಮರ್ಪಕವಾಗಿ ನಿರ್ದೇಶಿ ಸಿದೆ. ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಭಾರತೀಯರಾಗಿ, ನಮ್ಮ ದೇಶದಲ್ಲೇ ರೂಪುಗೊಂಡ ಈ ವಿಶ್ವಮಟ್ಟದ ನವೀನತೆಯು ಜಗತ್ತಿನ ( NEV ಶ್ರೇಷ್ಠ ಸಾಧನೆಗಳಿಗೆ ಸಮಾನವಾಗಿ ನಿಲ್ಲುತ್ತಿರುವುದರಲ್ಲಿ ನಮಗೆ ಹೆಮ್ಮೆ ಇದೆ.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೋಬೋಟಿಕ್ ಶಸ್ತ್ರ ಚಿಕಿತ್ಸೆಯ ವಿಶೇಷತೆಗಳುಸೂಕ್ಷ್ಮಛೇದನಗಳು ಕಡಿಮೆ ನೋವು ಮತ್ತು ತ್ವರಿತ ಚೇತರಿಕೆ ಕಡಿಮೆ ರಕ್ತನಷ್ಟ ನಿಯಂತ್ರಿತ ತೊಂದರೆಗಳು ನಿಖರ ಮತ್ತು ಸುರಕ್ಷತೆಯೊಂದಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದರ ಮೂಲಕ ಅತ್ಯಾಧುನಿಕ ಚಿಕಿತ್ಸೆ ಎಲ್ಲರಿಗೂ ಕೈಗೆಟುಕುವಂತಾಗಿದೆ.
ಬೋಧನಾ ಆಸ್ಪತ್ರೆಯಾಗಿ, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಭಾರತ ಮತ್ತು ವಿದೇಶಗಳಿಂದ ಬರುವ ಶಸ್ತ್ರಚಿಕಿತ್ಸಕರು, ಅರ್ಬುದ ಮತ್ತು ಸ್ತ್ರೀರೋಗ ತಜ್ಞರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ನರ್ಸಿಂಗ್ ತಜ್ಞರಿಗೆ ತರಬೇತಿ ಕೇಂದ್ರ ವಾಗಿದೆ. ಸಿಮ್ಯುಲೇಶನ್ ಲ್ಯಾಟ್ಗಳು, ಪ್ರಾಯೋಗಿಕ ತರಬೇತಿ ಮತ್ತು ನೈಜ ಶಸ್ತ್ರಚಿಕಿತ್ಸಾ ಅನುಭವದ ಮೂಲಕ, ಯೆನೆಪೋಯ ಮುಂದಿನ ತಲೆಮಾರಿನ ರೋಬೋಟಿಕ್ ಶಸ್ತ್ರಚಿಕಿತ್ಸಕರನ್ನು ರೂಪಿಸುತ್ತಿದೆ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.
ಯೆನಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ, ಸಹ ಕುಲಪತಿ ಫರ್ಹಾದ್ ಯೇನೆಪೋಯ ಅವರ ದೂರದೃಷ್ಟಿಯುತ ನಾಯಕತ್ವದ ಮಾರ್ಗದರ್ಶನದಲ್ಲಿ, ಈ ಆಸ್ಪತ್ರೆ ಸಮಾಜದ ಎಲ್ಲಾ ವರ್ಗಗಳಿಗೆ ವಿಶೇಷವಾಗಿ ಅತ್ಯಂತ ಆರ್ಥಿಕ ಹಿಂದುಳಿದವರಿಗೆ – ವಿಶ್ವಮಟ್ಟದ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ನೀಡಲು ನಿರಂತರವಾಗಿ ಬದ್ಧವಾಗಿದೆ ಎಂದವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ.ಮೂಸಬ್ಬ ಯುರೋ ಲಾಜಿ ವಿಭಾಗದ ಮುಖ್ಯಸ್ಥ ಡಾ.ಮುಜೀಬ್ ರಹ್ಮಾನ್, ಡಾ.ಜಲಾಲುದ್ದೀನ್ ಅಕ್ಟರ್, ಡಾ.ಅಲ್ತಾಫ್, ಡಾ.ಅಂಜುಮ್ ಮತ್ತು ಎಸ್‌ಎಸ್ ಐ ರೋಬೋಟಿಕ್ ಸಂಸ್ಥೆಯ ಸಿಇಒ ವಿಶ್ವ ಜ್ಯೋತಿ ಶ್ರೀವಾತ್ಸವ್ ಮೊದಲಾದವರು ಉಪಸ್ಥಿತರಿದ್ದರು.

