ಸ್ಪಂದನ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಸಂಭ್ರಮದ ಹಬ್ಬ. ಬಹು ದಿನಗಳ ಕನಸು ನನಸಾಗಿದ ಹೊತ್ತು. ನಮ್ಮ ಸಂಸ್ಥೆಯು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹೊತ್ತಿನಲ್ಲಿ ಬಹು ವರ್ಷಗಳ ಬೇಡಿಕೆಯಾದ ನಾಸಿಕ್ ಬ್ಯಾಂಡ್ ಖರೀದಿಯ ಉದ್ದೇಶದಲ್ಲಿ ಆಯೋಜಿಸಿದ ವಾಲಿಬಾಲ್ ಪಂದ್ಯಾಕೂಟ ಜಡಿಮಳೆಯ ನಡುವೆಯೂ ಸದಸ್ಯರ ಶ್ರಮದ ಫಲವಾಗಿ ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ವಿಷಯ. ಈ ಕಾರಣಕ್ಕಾಗಿ ಶ್ರಮಿಸಿದ ಸರ್ವ ಸದಸ್ಯರಿಗೆ ಮೊದಲಾಗಿ ವಂದಿಸಿಕೊಳ್ಳುತ್ತಿದ್ದೇವೆ.
ಸ್ಪಂದನ ಸಾಂಸ್ಕೃತಿಕ ಕಲಾ ವೇದಿಕೆಯ ವತಿಯಿಂದ ರವಿವಾರ ಸಂಸ್ಥೆಯು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ವಾಲಿಬಾಲ್ ಪಂದ್ಯಾಕೂಟ ಸ್ಪಂದನ ಟ್ರೋಫಿ -2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸುವ ಮೂಲಕ ಶ್ರೀ ನವದುರ್ಗಾ ಟ್ರಾನ್ಸ್ ಪೋರ್ಟ್ ನ ಮಾಲಕರಾದ ಶ್ರೀ ಎಂ. ಜಿ. ಗಂಗಾಧರ್ ರವರು ಉದ್ಘಾಟಿಸಿದರು. ಕುರ್ಕಾಲು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ನತಾಲಿಯಾ ಮಾರ್ಟಿಸ್ ರವರು ನಾಸಿಕ್ ಬ್ಯಾಂಡ್ ಉದ್ಘಾಟಿಸಿದರು. ಸಮಾಜ ಸೇವಕರಾದ ಶ್ರೀ ಪವನ್ ಕುಮಾರ್ ಶಿರ್ವ ಸ್ಟಿಕ್ಕರ್ ಅನಾವರಣಗೊಳಿಸಿದರು. ಸ್ಥಾಪಕಾಧ್ಯಕ್ಷರಾದ ಶ್ರೀ ಮಧುಸೂದನ್ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಶುಭಾಶಂಸನೆಗೈದರು.
ನಿಕಟ ಪೂರ್ವಾಧ್ಯಕ್ಷರಾದ ಶ್ರೀ ಪಾರ್ಥಸಾರಥಿ ಸ್ವಾಗತಿಸಿದರು. ಕಾರ್ಯದರ್ಶಿ ನಿತೀಶ್ ಕುಮಾರ್ ವಂದನಾರ್ಪಣೆಗೈದರು. ಶ್ರೀ ರಮೇಶ್ ಕೊಪ್ಪಲಂಗಡಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕ್ರೀಡಾ ಕಾರ್ಯದರ್ಶಿ ಶ್ರೀ ರವಿತೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಜ್ವಲ್ ಉಪಸ್ಥಿತರಿದ್ದರು.

