ಶಿಕ್ಷಣ: ವಿದ್ಯಾರ್ಥಿಗಳಿಗಾಗಿ ವಿವಿಧ ಸಂಸ್ಥೆಗಳಿಂದ ಸ್ಕಾಲರ್‌ಶಿಪ್ 2024-25 ಅರ್ಜಿ ಆಹ್ವಾನಿಸಲಾಗಿದೆ. ಹೌದು. . .ಕೋಟಕ್ ಮಹೀಂದ್ರಾ ಗ್ರೂಪ್ ಕಂಪನೀಸ್‌ನಿಂದ ಶಿಕ್ಷಣ ಮತ್ತು ಜೀವನೋಪಾಯದ ಕುರಿತು ಸಿಎಸ್‌ಆರ್ ಉಪಕ್ರಮದ ಅಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದೊಳಗಿನ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಕೋಟಕ್ ಜೂನಿಯರ್ ಸ್ಕಾಲರ್‌ಶಿಪ್ 2024-25 ಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುತ್ತದೆ.
1. ಕೋಟಕ್ ಜೂನಿಯರ್ ಸ್ಕಾಲರ್‌ಶಿಪ್ 2024-25:
ಅರ್ಹತೆ:
• ಅರ್ಜಿದಾರರು ತಮ್ಮ 2024ರ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ (ಎಸ್‌ಎಸ್‌ಸಿ/ ಸಿಬಿಎಸ್‌ಸಿ/ ಐಸಿಎಸ್‌ಸಿ) 85%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
• 2024-25ರ ಶೈಕ್ಷಣಿಕ ವರ್ಷಕ್ಕಾಗಿ ಮುಂಬೈ ಮೆಟ್ರೋಪಾಲಿಟನ್ ರೀಜಿಯನ್ (ಎಂಎಂಆರ್)ನಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗಗಳಿಗಾಗಿ ಜೂನಿಯರ್ ಕಾಲೇಜು/ಶಾಲೆಗಳಲ್ಲಿ 11ನೇ ತರಗತಿಗೆ ಪ್ರವೇಶ ಪಡೆದಿರಬೇಕು.
• ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ. 3,20,000 ಅಥವಾ ಕಡಿಮೆ ಆಗಿರಬೇಕು.
• ವಿದ್ಯಾರ್ಥಿಗಳು ಮುಂಬೈ ಮೆಟ್ರೋಪಾಲಿಟನ್ ರೀಜಿಯನ್ (ಎಂಎಂಆರ್)ನೊಳಗೆ ವಾಸಿಸುವವರಾಗಿರಬೇಕು.
ಪ್ರಯೋಜನ:
ಮಾರ್ಗದರ್ಶನ ಬೆಂಬಲ, ಶೈಕ್ಷಣಿಕ ನೆರವು, ವೃತ್ತಿ ಮಾರ್ಗದರ್ಶನ ಮತ್ತು ಹೊರಾಂಗಣ ಭೇಟಿಗಳ ಜೊತೆಗೆ ತಿಂಗಳಿಗೆ ರೂ. 3,500 ವಿದ್ಯಾರ್ಥಿವೇತನ.
ಅರ್ಜಿ ಸಲ್ಲಿಸಲು ಕೊನೆಯ ದಿನ:15-07-2024
ಆನ್‌ಲೈನಲ್ಲಿ ಅರ್ಜಿ ಹಾಕಿ: www.b4s.in/nkka/KJSP2
2. ಸ್ವಾಮಿ ವಿವೇಕಾನಂದ್ ಸ್ಕಾಲರ್‌ಶಿಪ್ ಫಾರ್ ಅಕಾಡಮಿಕ್ ಎಕ್ಸಲೆನ್ಸ್ ಸ್ಕೀಮ್ 2024
ಸ್ವಾಮಿ ವಿವೇಕಾನಂದ್ ಸ್ಕಾಲರ್‌ಶಿಪ್ ಫಾರ್ ಅಕಾಡಮಿಕ್ ಎಕ್ಸಲೆನ್ಸ್ ಸ್ಕೀಮ್ 2024 (ಹಿಂದಿನ ರಾಜೀವ್ ಗಾಂಧಿ ಸ್ಕಾಲರ್‌ಶಿಪ್), ಪದವಿಪೂರ್ವ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಮತ್ತು ವಿದೇಶದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನಾ ಕಾರ್ಯಕ್ರಮಗಳನ್ನು ಮುಂದುವರಿಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗ ರಾಜಸ್ಥಾನ ಸರ್ಕಾರದ ಉಪಕ್ರಮವಾಗಿದೆ.
ಅರ್ಹತೆ:
ಅರ್ಜಿದಾರರು ರಾಜಸ್ಥಾನದಲ್ಲಿ ನೆಲೆಸಿರುವ ಭಾರತೀಯ ನಾಗರಿಕರಾಗಿರಬೇಕು, ಯುಜಿ, ಪಿಜಿ, ಪಿಎಚ್‌ಡಿ. ಅಥವಾ ಪೋಸ್ಟ್ ಡಾಕ್ಟರಲ್ ಕಾರ್ಯಕ್ರಮವನ್ನು ಅನುಸರಿಸುತ್ತಿರಬೇಕು ಮತ್ತು ಈ ಆರ್ಥಿಕ ವರ್ಷದ ಜುಲೈ 1 ರಂದು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅರ್ಜಿದಾರರು ವಿದ್ಯಾರ್ಥಿವೇತನಕ್ಕೆ ಅರ್ಹರಾಗಲು ನಿರ್ದಿಷ್ಟ ಆದಾಯದ ಮಾನದಂಡಗಳನ್ನು ಪೂರೈಸಬೇಕು.
ಪ್ರಯೋಜನ:
₹1,00,000ದ ವರೆಗಿನ ಮಾಸಿಕ ಜೀವನ ವೆಚ್ಚಗಳು ಮತ್ತು ಇತರ ಪ್ರಯೋಜನಗಳು
ಅರ್ಜಿ ಸಲ್ಲಿಸಲು ಕೊನೆಯ ದಿನ: 15-01-2025
ಆನ್‌ಲೈನಲ್ಲಿ ಅರ್ಜಿ ಹಾಕಿ: www.b4s.in/nkka/RGAE1
3. ಟೋಫೆಲ್ ಇಂಡಿಯಾ ಚಾಂಪಿಯನ್‌ಶಿಪ್:
ಇದು ಇಟಿಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉಪಕ್ರಮವಾಗಿದ್ದು ಪದವಿಪೂರ್ವ ವಿದ್ಯಾರ್ಥಿಗಳಿಗೆ ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ವಿದೇಶದಲ್ಲಿ ಅಧ್ಯಯನ ಮಾಡಬೇಕೆಂದಿರುವ ಅವರ ಕನಸನ್ನು ಅನುಸರಿಸಲು ಸಹಾಯ ಮಾಡುತ್ತದೆ.
ಅರ್ಹತೆ:
ಇದರಲ್ಲಿ ಭಾಗವಹಿಸುವವರು ಮಾನ್ಯತೆ ಪಡೆದ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ (ಕಾಲೇಜು ಅಥವಾ ವಿಶ್ವವಿದ್ಯಾಲಯ) ಪ್ರಸ್ತುತ ಪದವಿಪೂರ್ವ ಅಧ್ಯಯನದ 3 ನೇ ಅಥವಾ 4 ನೇ ವರ್ಷಕ್ಕೆ ದಾಖಲಾಗಿರಬೇಕು. ಜೊತೆಗೆ, ಭಾರತದಲ್ಲಿ ತಮ್ಮ ಪದವಿಪೂರ್ವ ಅಥವಾ ಪದವಿ ಅಧ್ಯಯನವನ್ನು ಪೂರ್ಣಗೊಳಿಸಿರುವ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಬಯಸುತ್ತಿರುವ ಅರ್ಜಿದಾರರು ಅಥವಾ ಎರಡು ವರ್ಷಗಳವರೆಗೆ ನುರಿತ ವೃತ್ತಿಪರ ಕೆಲಸದ ಅನುಭವ ಹೊಂದಿರುವವರು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಬಹುಮಾನ/ಪ್ರಯೋಜನ: ಒಟ್ಟು ₹15 ಲಕ್ಷ ಬಹುಮಾನದ ಮೊತ್ತ.
ಅರ್ಜಿ ಸಲ್ಲಿಸಲು ಕೊನೆಯ ದಿನ: 31-07-2024
ಆನ್‌ಲೈನಲ್ಲಿ ಅರ್ಜಿ ಸಲ್ಲಿಸಿ: www.b4s.in/nkka/TOIC1

