ನವದೆಹಲಿ: ಎನ್ಇಇಟಿ ಯುಜಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಶನಿವಾರ ಮಧ್ಯಾಹ್ನದ ವೇಳೆಗೆ ಕೇಂದ್ರವಾರು ಪ್ರಕಟಿಸಲು ಎನ್ಎಟಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಶನಿವಾರ ಫಲಿತಾಂಶ ಪ್ರಕಟಗೊಂಡರೆ, ಸೋಮವಾರದಂದು ಎನ್ಇಇಟಿ ಯುಜಿ ಪರೀಕ್ಷೆಗಳಿಗೆ ಸಂಬಂಧಪಟ್ಟ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಬಹುದು ಎಂದು ಕೋರ್ಟ್ ಹೇಳಿದೆ.
“ಪ್ರತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಫಲಿತಾಂಶವನ್ನು ಪ್ರಕಟಿಸಬೇಕು. ಶುಕ್ರವಾರ ಸಂಜೆ 5 ಗಂಟೆಯೊಳಗೆ ಬಿಡುಗಡೆ ಮಾಡಲಿ. ಸೋಮವಾರ ಪ್ರಕರಣದ (ಪ್ರಕರಣದ ವಿಚಾರಣೆ) ವಿಚಾರಣೆಯ ಮುಕ್ತಾಯ ಮಾಡಬೇಕಿದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಹೇಳಿತ್ತು. ಎನ್‌ಟಿಎ ವಕೀಲರ ಕೋರಿಕೆಯ ಮೇರೆಗೆ ಫಲಿತಾಂಶಗಳನ್ನು ಪ್ರಕಟಿಸುವ ಗಡುವನ್ನು ಶನಿವಾರ ಮಧ್ಯಾಹ್ನದವರೆಗೆ ವಿಸ್ತರಿಸಲಾಯಿತು.
ಫಲಿತಾಂಶಗಳನ್ನು ಪ್ರಕಟಿಸುವಾಗ ವಿದ್ಯಾರ್ಥಿಗಳ ಗುರುತನ್ನು ರಕ್ಷಿಸುವಂತೆಯೂ ಉನ್ನತ ನ್ಯಾಯಾಲಯ ಏಜೆನ್ಸಿಗೆ ನಿರ್ದೇಶನ ನೀಡಿದೆ.

