ಮಂಗಳೂರು : ಶಕ್ತಿನಗರದ ಸಾನಿಧ್ಯ ಸಮೂಹ ಸಂಸ್ಥೆಗಳ ವತಿಯಿಂದ ಗಾಂಧಿ ಜಯಂತಿ ಹಾಗೂ ಪೋಷಕರ–ಶಿಕ್ಷಕರ ಸಭೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಕದ್ರಿಯ ನ್ಯೂರೋನೋವಾ ಫಿಸಿಕಲ್ ರಿಹ್ಯಾಬಿಲಿಟೇಶನ್ ಸೆಂಟರ್‌ನ ಸಂಸ್ಥಾಪಕಿ ಡಾ. ವಿನಾಂತಿ ರೈ ಮಾತನಾಡಿ, ವಿಶೇಷ ಅಗತ್ಯಗಳಿರುವ ಮಕ್ಕಳನ್ನು ಅವರ ರೋಗನಿರ್ಣಯದಿಂದ ಗುರುತಿಸದೆ, ಸಾಮರ್ಥ್ಯ ಮತ್ತು ಸಾಧನೆಯ ಆಧಾರದಲ್ಲಿ ಬೆಳೆಸಬೇಕು.

ಸಣ್ಣ ಗೆಲುವುಗಳನ್ನು ಗುರುತಿಸಿ, ಮಕ್ಕಳಿಗೆ ಸ್ವತಃ ಊಟ, ಬಟ್ಟೆ ಧರಿಸುವುದು, ಶೂ ಹಾಕಿಕೊಳ್ಳುವುದು ಸೇರಿದಂತೆ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಇದರಿಂದ ಅವರ ಸ್ವಾವಲಂಬನೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಏಕೀಕರಣ ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗಣೇಶ್ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಪ್ರಮುಖರಾದ ಉಷಾ ವಿ. ಎಸ್ ಶೆಟ್ಟಿ, ವಿಜಯ ಸುಧೀರ್ ಶೆಟ್ಟಿ, ದಿವ್ಯಾ ಡಿ ಬಾಳಿಗ, ಲ /ಎರಿಕ್ ಜಾನ್ ಬ್ಯಾಪ್ಟಿಸ್ಟ್ ಡಿಸೋಜಾ ಉಪಸ್ಥಿತರಿದ್ದರು. ಸಾನಿಧ್ಯ ಸಂಸ್ಥೆಯ ಪ್ರಾಂಶುಪಾಲೆ ಮೀನಾಕ್ಷಿ ಎಂ.ಕೆ. ವಂದಿಸಿದರು.ಸುಮಾ ಡಿ. ಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.