ಮಂಗಳೂರು: ಸಹ್ಯಾದ್ರಿಯ ಪ್ರೊ. ಪ್ರಸಾದ್ ಚಂದ್ರನ್ ಎನ್. ಅವರಿಗೆ ಇಂಜಿನಿಯರಿಂಗ್ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು.

ಪ್ರಸಾದ್ ಚಂದ್ರನ್ ಇವರು ‘ಮಾಡೆಲ್ಲಿಂಗ್ ಅಂಡ್ ಓಪ್ಟಿಮಿಝಷನ್ ಆಫ್ ಏಕೋ-ಫ್ರೆಂಡ್ಲಿ ಮೌಲ್ಡಿಂಗ್ ಮೆಟೀರಿಯಲ್ಸ್ ಫಾರ್ ಸ್ಯಾಂಡ್ ಕಾಸ್ಟಿಂಗ್ ಪ್ರೋಸೆಸ್ ಯುಸಿಂಗ್ ಸ್ಟ್ಯಾಟಿಸ್ಟಿಕಲ್ ಅಂಡ್ ಸಾಫ್ಟ್ ಕಂಪ್ಯೂಟಿಂಗ್ ಟೂಲ್ಸ್’ ಎಂಬ ಶೀರ್ಷಿಕೆಯ ಪಿಎಚ್‌ಡಿ ಪ್ರಬಂಧವನ್ನು ನವೆಂಬರ್ 21, 2025 ರಂದು ಡಾ. ಮಂಜುನಾಥ್ ಪಟೇಲ್ ಜಿ ಸಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮಂಡಿಸಿದ್ದಾರೆ. ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಯನ್ನುನೀಡಿದೆ.

ಬಿ.ಇ.ಯಿಂದ ಪಿಎಚ್.ಡಿ.ವರೆಗಿನ ಶೈಕ್ಷಣಿಕ ಪಯಣ: ಸಹ್ಯಾದ್ರಿ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ., ಎಮ್.ಟೆಕ್. ಮತ್ತು ಪಿಎಚ್‌ಡಿ. ಎಂಬ ಮೂರು ಪದವಿಗಳನ್ನು ಪಡೆದ ಮೊದಲ ಅಭ್ಯರ್ಥಿ ಪ್ರೊ. ಪ್ರಸಾದ್ ಚಂದ್ರನ್ ಎನ್ ಆಗಿದ್ದಾರೆ. ಇವರು 17 ವರ್ಷಗಳಿಂದ ಸಹ್ಯಾದ್ರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

2008 ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಮತ್ತು ಅಧ್ಯಾಪಕ ಸದಸ್ಯರಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2011 ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಪದವಿಯನ್ನು ಪೂರ್ಣಗೊಳಿಸಿದರು.

ನಂತರ 2014 ರಲ್ಲಿ ಮಷೀನ್ ಡಿಸೈನ್ ನಲ್ಲಿ ಎಮ್.ಟೆಕ್. ಪದವಿಯನ್ನು ಪಡೆದರು. 2017ರಲ್ಲಿ, ಇವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಡಾಕ್ಟರ್ ಒಫ್ ಫಿಲಾಸಫಿ (ಪಿಎಚ್‌.ಡಿ) ಪದವಿಗಾಗಿ ನೋಂದಾಯಿಸಿಕೊಂಡಿದ್ದರು.

ಪ್ರೊ. ಪ್ರಸಾದ್ ಚಂದ್ರನ್ ಅವರು ಶ್ರೀ ನಾರಾಯಣನ್ ಮತ್ತು ಶ್ರೀಮತಿ ಕಾತ್ಯಾಯನಿ ದಂಪತಿಯ ಪುತ್ರ. ಅವರು ಮೇಘಾ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಅಗಮ್ಯ ಎಂ. ಪ್ರಸಾದ್ ಎಂಬ ಮಗಳು ಇದ್ದಾಳೆ. ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗ ಪ್ರೊ. ಪ್ರಸಾದ್ ಚಂದ್ರನ್ ಇವರಿಗೆ ಅಭಿನಂದನೆಗಳನ್ನು ಕೋರಿದ್ದಾರೆ.