ಗುಂಡ್ಲುಪೇಟೆ : ಜುಲೈ ತಿಂಗಳಲ್ಲಿ ಮಲೆಷ್ಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪ್ರಿಸ್ಬಿ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಪ್ರತಿನಿಧಿಸುತ್ತಿರುವ ತಾಲೂಕಿನ ಶಿಂಡನಪುರ ಗ್ರಾಮದ ರೈತನ ಮಗಳು ಸಂಧ್ಯಾಗೆ ಗಡಿನಾಡ ರಕ್ಷಣಾ ಸೇನೆ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಲ್ಟಿಮೇಟ್ ಪ್ರಿಸ್ಬಿ ಕ್ರೀಡಾಕೂಟಕ್ಕೆ ಸ್ಥಳೀಯ ಪ್ರತಿಭೆ ಆಯ್ಕೆಯಾಗಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ, ರೈತನ ಮಗಳಾಗಿ ಸಾಧನೆ ಮಾಡಿರುವ ಸಂಧ್ಯಾ ಅವರು ಭಾರತಕ್ಕೆ ಕೀರ್ತಿ ತರಲಿ ಎಂದು ಆರ್.ಡಿ. ಉಲ್ಲಾಸ್ ಹಾರೈಸಿದರು.

ಕ್ರೀಡಾ ಸಾಧನೆಯನ್ನ ಹೆತ್ತವರಿಗೆ ಸಮರ್ಪಿಸಿದ ಸಂಧ್ಯಾ ನನ್ನಲ್ಲಿನ ಕ್ರೀಡಾ ಆಸಕ್ತಿಗೆ ಬೆನ್ನಲುಬಾಗಿ ನಿಂತಿದ್ದಲ್ಲದೆ ಪೋತ್ಸಾಹ ನೀಡುವ ಮೂಲಕ ಹುರಿದುಂಬಿಸಿದರು, ತೆರೆಮರೆಯಲ್ಲಿ ಸಾಧನೆಗೈದು ಎಲೆಮರೆಕಾಯಿಯಂತಿದ್ದವರನ್ನ ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಶಾಲಾ ಸಹಪಾಠಿಗಳು, ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಗ್ರಾಮಸ್ಥರಿಗೆ ಧನ್ಯವಾದ ತಿಳಿಸುತ್ತೇನೆ , ಭಾರತಕ್ಕಾಗಿ ಪ್ರತಿನಿಧಿಸುತ್ತಿರುವುದು ನನ್ನ ಸೌಭಾಗ್ಯ ಎಂದು ಸಂತಸ ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಮುನೀರ್ ಪಾಷಾ, ತಾಲೂಕು ಅಧ್ಯಕ್ಷ ಅಬ್ದುಲ್ ರಷೀದ್, ಯುವ ಘಟಕ ಅದ್ಯಕ್ಷ ಇಲಿಯಾಸ್, ರಾಜ್ಯ ಉಪಾಧ್ಯಕ್ಷ ಅಲೀಂಪಾಷಾ, ಕಾರ್ಯದರ್ಶಿ ಕಾಳಿಂಗಸ್ವಾಮಿ ಸಿದ್ದಾರ್ಥ, ನೃತ್ಯ ಸಂಯೋಜಕ ಸದ್ದಾಂ , ಗ್ರಾಮದ ಮುಖಂಡರಾದ ಮಂಜುನಾಥ್, ಮಹದೇವಸ್ವಾಮಿ, ಸತ್ಯ ಸೇರಿದಂತೆ ಹಲವರು ಹಾಜರಿದ್ದರು.