ಬೀದರ್ : ಶಾಲಾ ಶಿಕ್ಷಣ ಇಲಾಖೆ ಮತ್ತು ಸೊಸೈಟಿ ಆಫ್ ಫಾರ್ಮರ್ಸ್ ಕಮ್ಯುನಿಟಿ (ರೈತ ಸಂಘ) ಸಹಯೋಗದಲ್ಲಿ ಬೀದರ್ ಜಿಲ್ಲಾ – ಔರಾದ್(ಬಿ)-ಕಮಲನಗರ ಹಾಗೂ ಬಸವಕಲ್ಯಾಣ-ಹುಲ್ಸೂರು ತಾಲೂಕಿನಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲೀಕರಣ ಮತ್ತು ನವೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ, ಎ.ಪಿ. ಪಾಠಶಾಲಾ ಸಾಫ್ಟ್‌ವೇರ್‌ನ ಪ್ರಾಯೋಗಿಕ ಅನುಷ್ಠಾನ ಆರಂಭವಾಗುತ್ತಿದೆ.
ಈ ನಿಟ್ಟಿನಲ್ಲಿ, ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಅಥವಾ ಕಂಪ್ಯೂಟರ್/ತತ್ಸಮಾನ ವಿಷಯದಲ್ಲಿ ಅನುಭವ ಹೊಂದಿರುವ ಶಿಕ್ಷಕರಿಗೆ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ.
ತರಬೇತಿ ವಿವರಗಳು :
🔸 ಔರಾದ್(ಬಿ)-ಕಮಲನಗರ ತಾಲೂಕು:
📅 18 ಜುಲೈ 2025 (ಶುಕ್ರವಾರ)
🕟 ಸಂಜೆ 4:30 ರಿಂದ 6:30 ರವರೆಗೆ
📍 ಫತ್ರಿಸ್ವಾಮಿ ಸಭಾಂಗಣ, ಔರಾದ್(ಬಿ)
🔸 ಬಸವಕಲ್ಯಾಣ-ಹುಲ್ಸೂರು ತಾಲೂಕು:
📅 19 ಜುಲೈ 2025 (ಶನಿವಾರ)
🕧 ಮಧ್ಯಾಹ್ನ 12:30 ರಿಂದ 2:30 ರವರೆಗೆ
📍 ಬಿಆರ್‌ಸಿ ಕಛೇರಿ, ಬಸವಕಲ್ಯಾಣ
ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ, ಮೇಲ್ಕಂಡ ತಾಲೂಕುಗಳಲ್ಲಿ ಬರುವ ಶಾಲೆಗಳ ಮುಖ್ಯೋಪಾಧ್ಯಾಯರು ಅಥವಾ ಅನುಭವೀ ತತ್ಸಮಾನ ವಿಷಯದ ಒಬ್ಬ ಶಿಕ್ಷಕರು ಪಾಲ್ಗೊಳ್ಳಬೇಕು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಮುಖ್ಯ ಅತಿಥಿಗಳು ತಾಲ್ಲೂಕು ತಹಶೀಲ್ದಾರರು, ಬ್ಲಾಕ್ ಎಜುಕೇಶನ್ ಆಫೀಸರ್ (BEO), ಬಿಆರ್‌ಸಿ ಅಧಿಕಾರಿ, ಸೊಸೈಟಿ ಆಫ್ ಫಾರ್ಮರ್ಸ್ ಕಮ್ಯುನಿಟಿಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕ್ರಮ ಆಯೋಜನಾ ಸಮಿತಿಯ ಎಲ್ಲಾ ಸದಸ್ಯರು, ಎ.ಪಿ. ಸಾಫ್ಟ್‌ವೇರ್ ಕಂಪನಿಯ ಸಿಇಒ, ಪ್ರಮುಖ ರೈತ ಮುಖಂಡರು ಭಾಗವಹಿಸಲಿದ್ದಾರೆ.
ಈ ತಾಂತ್ರಿಕ ತರಬೇತಿ ಕಾರ್ಯಕ್ರಮವು ಶಾಲೆಗಳ ಅಭಿವೃದ್ಧಿಗೆ ಬಹುಮುಖವಾಗಿ ಸಹಕಾರಿಯಾಗಲಿದ್ದು, ನಿಗದಿತ ಸಮಯಕ್ಕೆ ಕಾರ್ಯಾಗಾರ ಪ್ರಾರಂಭವಾಗುವ ಕಾರಣ ಶಿಕ್ಷಕರು ಹಾಗೂ ಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಆಗಮಿಸಬೇಕಾಗಿ ವಿನಂತಿ ಮಾಡಲಾಗಿದೆ.

