ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದು ಎಲ್ಲಾ ಪೋಷಕರ ಬಯಕೆ ಆದರೆ ಆಸೆ ಇರುವಷ್ಟು ಹಣ ಇರುವುದಿಲ್ಲ. ನಮ್ಮ ಹಾಗೆ ನಮ್ಮ ಮಕ್ಕಳು ಕೂಡ ಅನಕ್ಷರಸ್ಥರಾಗಬಾರದು ಎಂಬ ಉದ್ದೇಶದಿಂದ ಕಷ್ಟಪಟ್ಟು ಕಾಲೇಜು ಅಥವಾ ಶಾಲೆಗೆ ಸೇರಿಸುತ್ತಾರೆ. ಆದರೂ ಸಾಲ ಭಾದೆಗೆ ಭೀಳುತ್ತಾರೆ. ಇದೀಗ ಅಂತ ಪೋಷಕರಿಗಾಗಿ ಸರ್ಕಾರಿ ಬೆಂಬಲದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ ರೂಪಿಸಿದ್ದು 15 ಲಕ್ಷ ರೂವರೆಗೆ ಸಾಲದ ಅವಕಾಶ ನೀಡಲಾಗುತ್ತದೆ.

2015ರಿಂದ ಚಾಲನೆಯಲ್ಲಿರುವ ಈ ಸ್ಕೀಮ್​ನಲ್ಲಿ ಭಾರತದ ಯಾವುದೇ ನಾಗರಿಕರು ಸಾಲ ಪಡೆಯಬಹುದಾಗಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇರುವ ವಿದ್ಯಾರ್ಥಿಗಳಿಗೆ ಈ ಸಾಲ ಉಪಯುಕ್ತವಾಗುತ್ತದೆ. ಹಣಕಾಸು ತೊಂದರೆಯಿಂದ ಓದಿಗೆ ತೊಂದರೆ ಆಗುವುದನ್ನು ಇದು ತಪ್ಪಿಸುತ್ತದೆ.

ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಅಡಿಯಲ್ಲಿ ಬ್ಯಾಂಕುಗಳಿಂದ ಸಾಲ ಸಿಗುತ್ತದೆ. ಉನ್ನತ ಶಿಕ್ಷಣದ ಕೋರ್ಸ್ ಭಾರತದಲ್ಲಿಯಾದರೆ ಏಳೂವರೆ ಲಕ್ಷ ರೂವರೆಗೂ ಸಾಲ ಪಡೆಯಬಹುದು. ವಿದೇಶಗಳಲ್ಲಿ ಓದುವುದಾದರೆ 15 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.

ಈ ಯೋಜನೆ ಅಡಿಯಲ್ಲಿ 22 ವಿಧದ ಶಿಕ್ಷಣ ಸಾಲಗಳು ಸಿಗುತ್ತವೆ. 14 ಬ್ಯಾಂಕುಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಅಂದರೆ ಈ 14 ಬ್ಯಾಂಕ್​ಗಳಲ್ಲಿ ಸಾಲ ಪಡೆಯಬಹುದು. ಎಚ್​ಡಿಎಫ್​ಸಿ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಐಸಿಐಸಿಐ, ಎಕ್ಸಿಸ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್ ಇದರಲ್ಲಿ ಒಳಗೊಂಡಿವೆ.

ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಪಡೆಯಲು ಅರ್ಹತೆ ಏನು?

ಅಭ್ಯರ್ಥಿಯು ಪ್ಲಸ್ 2 ಅಥವಾ ದ್ವಿತೀಯ ಪಿಯು ಮುಗಿಸಿರಬೇಕು. ಪದವಿ, ಮಾಸ್ಟರ್ಸ್ ಇತ್ಯಾದಿ ಕೋರ್ಸ್​ಗೆ ಅರ್ಜಿ ಸಲ್ಲಿಸಿರಬೇಕು. ಈ ಯೋಜನೆಗೆ ಅಧಿಕೃತ ವೆಬ್​ಸೈಟ್ ಅಭಿವೃದ್ದಿಪಡಿಸಲಾಗಿದೆ. ಅದರ ವಿಳಾಸ ಇಂತಿದೆ: vidyalakshmi.co.in/Students/

ಈ ಪೋರ್ಟಲ್​ನಲ್ಲಿ ರಿಜಿಸ್ಟರ್ ಮಾಡಿಕೊಂಡು, ಕಾಮನ್ ಎಜುಕೇಶನ್ ಲೋನ್ ಅಪ್ಲಿಕೇಶನ್ (ಸೆಲಾಫ್) ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಈ ಸಾಲಕ್ಕೆ ಬಡ್ಡಿದರ ಬ್ಯಾಂಕಿಂಗ್ ಬ್ಯಂಕಿಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಪರ್ಸನಲ್ ಲೋನ್​ಗಿಂತ ಕಡಿಮೆ ಬಡ್ಡಿ ಇರುತ್ತದೆ. ಜನಸಮರ್ಥ್ ವೆಬ್​ಸೈಟ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಒಂದಷ್ಟು ಡಿಸ್ಕೌಂಟ್ ಸಿಗುತ್ತದೆ. ಆದರೆ, ಪೋಷಕರ ಆದಾಯ ವರ್ಷಕ್ಕೆ ನಾಲ್ಕೂವರೆ ಲಕ್ಷ ರೂಗಿಂತ ಕಡಿಮೆ ಇರಬೇಕು.

ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಒದಗಿಸುವ ಬ್ಯಾಂಕುಗಳಿವು
ಬ್ಯಾಂಕ್ ಆಫ್ ಇಂಡಿಯಾ
ಕೆನರಾ ಬ್ಯಾಂಕ್
ಐಡಿಬಿಐ ಬ್ಯಾಂಕ್
ಅಭ್ಯುದಯ ಬ್ಯಾಂಕ್
ಎಕ್ಸಿಸ್ ಬ್ಯಾಂಕ್
ಜಿಪಿ ಪಾರ್ಸಿಕ್ ಬ್ಯಾಂಕ್
ಎಚ್​ಡಿಎಫ್​ಸಿ ಬ್ಯಾಂಕ್
ಐಸಿಐಸಿಐ ಬ್ಯಾಂಕ್
ದೇನಾ ಬ್ಯಾಂಕ್
ದೊಂಬಿವಿಲಿ ನಗರಿ ಸಹಕಾರಿ ಬ್ಯಾಂಕ್
ಕೋಟಕ್ ಮಹೀಂದ್ರ ಬ್ಯಾಂಕ್
ಅಲಹಾಬಾದ್ ಬ್ಯಾಂಕ್
ಕರ್ಣಾಟಕ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್