ಮಂಗಳೂರು: ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ , ಕೂಳೂರು ಕ್ಯಾಂಪಸ್‌ನ ವೈ.ಎಂ.ಕೆ. ಸಭಾಂಗಣದಲ್ಲಿ ಇದೇ ಬರುವ ಸೆಪ್ಟೆಂಬರ್ 07ರ ಸೋಮವಾರದಂದು ಬೆಳಗ್ಗೆ 9.30ಕ್ಕೆ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ‘ನವ್ಯಾರಂಭ-2026’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಕಂಪೂಟರ್ ಸೈನ್ಸ್, ನಿರ್ವಹಣಾ ಶಾಸ್ತ್ರ ಮತ್ತು ವಿಜ್ಞಾನ, ವಿಭಾಗದ, ಎಂ.ಸಿ.ಎ ,ಎಂ.ಬಿ.ಎ , ಎಂ.ಎಸ್ಸಿ ಮೈಕ್ರೊಬಯಲಜಿ, ಎಂಎಸ್ಸಿ ಫೋರೆನ್ಸಿಕ್‌ಸೈನ್ಸ್,ಮತ್ತು ಎಂಎಸ್ಸಿ ಫುಡ್‌ಸೈನ್ಸ್‌ಏಂಡ್ ನ್ಯೂಟ್ರಿಷನ್, ಈ ಮೂರು ಸ್ನಾತಕೋತ್ತರ ವಿಭಾಗಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ನೂತನ ವಿದ್ಯಾರ್ಥಿಗಳನ್ನು ಕಾಲೇಜಿಗೆ ಮತ್ತು ಹೊಸ ಬಗೆಯ ಅಧ್ಯಯನ ಲೋಕಕ್ಕೆ ಸ್ವಾಗತಿಸುವ ನಿಟ್ಟಿನಲ್ಲಿ ಈ ವಿಶೇಷ ದೀಕ್ಷಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿಯ ಪೂರ್ಣಪ್ರಜ್ಞಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಪಿ. ಶ್ರೀರಮಣ ಐತಾಳ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯ ಇದರ ಪರೀಕ್ಷಾ ನಿಯಂತ್ರಕರಾದ ಡಾ. ಬಿ. ಟಿ. ನಂದೀಶ್ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಯೆನೆಪೋಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್ ರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಹಾಗೂ ಉಪಪ್ರಾಂಶಪಾಲರಾದ ಪ್ರೊ. ಶರೀನಾ ಪಿ. ಮತ್ತು ಸಂಸ್ಥೆಯ ಉಪಪ್ರಾಂಶಪಾಲರಾದ ಶ್ರೀ ನಾರಾಯಣ ಸುಕುಮಾರ್ ಎ. ಅವರು ಉಪಸ್ಥಿತರಿರುವರು. ಎಂ.ಬಿ.ಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರೊವೀನ ಶರೋನ್ ಸೊನ್ಸ್ ಅವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ. ಹೊಚ್ಚ ಹೊಸ ಶೈಕ್ಷಣಿಕ ಹೆಜ್ಜೆಯನ್ನಿಡುತ್ತಿರುವ ನೂತನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾರ್ಗದರ್ಶನ ಹಾಗೂ ಸ್ಪೂರ್ತಿಯನ್ನು ತುಂಬಲು ಈ ‘ನವ್ಯಾರಂಭ’ ಕಾರ್ಯಕ್ರಮವು ವೇದಿಕೆಯಾಗಲಿದೆ.

