ನವದೆಹಲಿ: ನೀಟ್‌-ಯುಜಿ 2024 ಪರೀಕ್ಷೆ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ನಗರ ಮತ್ತು ಕೇಂದ್ರವಾರು ಫಲಿತಾಂಶವನ್ನು ಇಂದು ಪ್ರಕಟಿಸಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ಎನ್‌ಟಿಎ NEET ನ ಅಧಿಕೃತ ವೆಬ್‌ಸೈಟ್‌ exams.nta.ac.in/NEET/ ಮತ್ತು neet.ntaonline.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.

ನೀಟ್‌ ಯುಜಿ ಫಲಿತಾಂಶವನ್ನು ಜು.20 ರಂದು ಮಧ್ಯಾಹ್ನ ಒಳಗೆ ಪ್ರಕಟಿಸಬೇಕು ಎಂದು ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿತ್ತು. ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ. ಆದರೆ ವಿದ್ಯಾರ್ಥಿಗಳ ಹೆಸರನ್ನು ಬಹಿರಂಗಪಡಿಸಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು.

ಸಿಜೆಐ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಶನಿವಾರದ ಮಧ್ಯಾಹ್ನದೊಳಗೆ ನಗರ ಮತ್ತು ಕೇಂದ್ರವಾರು ಪ್ರತ್ಯೇಕವಾಗಿ ಫಲಿತಾಂಶಗಳನ್ನು ಪ್ರಕಟಿಸಲು ಆದೇಶಿಸಿತ್ತು.