ಹೊಸದಿಲ್ಲಿ: ನೀಟ್-ಪಿಜಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟವಾಗಲಿದ್ದು, ಫಲಿತಾಂಶವು ರೋಲ್ ನಂಬರ್ನೊಂದಿಗೆ ಮೆರಿಟ್ ಲಿಸ್ಟ್ ಒಳಗೊಂಡಿರಲಿದೆ. ಬಳಿಕ ಪರೀಕ್ಷಾ ಆಯೋಗ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಅಂಕಪಟ್ಟಿಯನ್ನು ಕಳುಹಿಸಲಿದೆ. ಫಲಿತಾಂಶಕ್ಕಾಗಿ natboard.edu.in ವೆಬ್ಸೈಟ್ ನೋಡಲು ಸೂಚಿಸಿದೆ.
ಇದರಲ್ಲಿ 26,168 ಮಂದಿ ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ), 13,649 ಮಂದಿ ಮಾಸ್ಟರ್ ಆಫ್ ಸರ್ಜರಿ (ಎಂಎಸ್), 922 ಮಂದಿ ಪಿ.ಜಿ. ಡಿಪ್ಲೊಮೋ ಕೋರ್ಸ್ ಗೆ ಕೌನ್ಸೆಲಿಂಗ್ ಮೂಲಕ ಪ್ರವೇಶ ಪಡೆಯಲಿದ್ದಾರೆ.
ನೀಟ್ ಪಿಜಿ 2024 ಪರೀಕ್ಷೆಯು ಆಗಸ್ಟ್ 11, 2024 ರಂದು ಯಶಸ್ವಿಯಾಗಿ ನಡೆಯಿತು. ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಮೋಡ್ನಲ್ಲಿ ಎರಡು ಶಿಫ್ಟ್ಗಳಲ್ಲಿ ನಡೆಯಿತು. ದೇಶದಾದ್ಯಂತ 416 ಪರೀಕ್ಷಾ ಕೇಂದ್ರಗಳಲ್ಲಿ 170 ಪರೀಕ್ಷಾ ನಗರಗಳಲ್ಲಿ ನಡೆದ NEET PG 2024 ಪರೀಕ್ಷೆಗೆ 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.

