ಮಂಗಳೂರು: ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ) ತನ್ನ ವಾರ್ಷಿಕ ರಾಷ್ಟ್ರಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ಟಿಯಾರಾ ’26 – ಟೆಕ್, ಟ್ಯಾಲೆಂಟ್ ಮತ್ತು ಟ್ರಯಂಫ್ ಅನ್ನು ಅಕ್ಟೋಬರ್ 6 ಮತ್ತು 7, 2026 ರಂದು ಆಯೋಜಿಸಿದೆ.

ದೇಶಾದ್ಯಂತದ ಯುಜಿ, ಪಿಜಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವ ಈ ಎರಡು ದಿನಗಳ ಉತ್ಸವವು ತಂತ್ರಜ್ಞಾನ, ಸೃಜನಶೀಲತೆ, ಪ್ರತಿಭೆ ಮತ್ತು ಮನರಂಜನೆಯ ಅಪೂರ್ವ ಸಂಗಮವಾಗಲಿದೆ. ವಿವಿಧ ಸ್ಪರ್ಧೆಗಳಿಗೆ ಒಟ್ಟು ₹5,00,000 ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಈ ಉತ್ಸವದಲ್ಲಿ ನಾಲ್ಕು ಮುಖ್ಯ ವಿಭಾಗಗಳಲ್ಲಿ 25ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ:

ತಾಂತ್ರಿಕ ವಿಭಾಗ: ಆರ್ಸಿ ಬ್ಲೇಜ್, ಹೈಡ್ರೋ ಡೈನಾಮಿಕ್ಸ್, ಒನ್ ಪೀಸ್, ಪಿಚ್ ಟ್ಯಾಂಕ್, ರೋಬೋ ಕಿಕ್, ರೂಟ್ ಲೈನ್, ಡ್ರೋನ್ ಝೋನ್ ಮತ್ತು ಗೇಮ್ ಆಫ್ ಸೀಸರ್.

ಮೆಗಾ ಇವೆಂಟ್ಸ್: ರೋಬೋ ವಾರ್ಸ್, ಫ್ಲೈಟ್ ಫ್ಯೂರಿ, ಫ್ಯಾಷನ್ ಫ್ಲೇರ್, ಸ್ಪಿನ್ ದಿ ಡಿಸ್ಕ್ ಮತ್ತು ಗ್ರೂವ್.

ಸಾಂಸ್ಕೃತಿಕ ವಿಭಾಗ: ಸ್ವರ ಸಿಂಫನಿ ಮತ್ತು ಡ್ಯಾನ್ಸಿಂಕ್.
ತಾಂತ್ರಿಕೇತರ ವಿಭಾಗ: ಗ್ರೋಜಾ ಗಾಂಟ್ಲೆಟ್, ಕ್ವಿಜ್ ವಿಝ್, ಗೋಲ್ಡನ್ ಟ್ರೇಲ್, ಸಿಂಗ್ಯುಲಾರಿಟಿ ಶೋಡೌನ್, ಬ್ಯಾಟಲ್ ಆಫ್ ಬೂಯಾ, ಹಸಲ್ ಮ್ಯಾನೇಜರ್, ಪಿಕ್ಸೆಲ್ ಮೇನಿಯಾ, ರೀಲೋಡ್, ಪ್ರೆಸ್ಕಾನ್ ಮತ್ತು ಲೇಟೆಂಟ್ ಅಟ್ ಟಿಯಾರಾ.

ಉತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಲಾದ ‘ಡಿಜೆ ನೈಟ್’ನಲ್ಲಿ ಪ್ರಸಿದ್ಧ ಡಿಜೆ ನೀಲ್ ಎಸ್ ಛಬ್ರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನೋಂದಣಿಗಾಗಿ www.tiarasjec.com ವೆಬ್ಸೈಟ್ಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಉಪನ್ಯಾಸಕ ಸಂಯೋಜಕರು:
ಸಚಿನ್ ಯು – 9449534084 ಮತ್ತು ಹಿಮಾನಿ ಕಿಶನ್ ರಾಜ್ – 8970367529
ವಿದ್ಯಾರ್ಥಿ ಸಂಯೋಜಕರು:
ಪ್ರತೀಕ್ ಮೊರಾಸ್ – 9148218235 ಮತ್ತು ನಾಝ್ಮಿನ್ ಝಿಯಾ – 6282714012