ಬೆಂಗಳೂರು: ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಸೇರಿ ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 1 ಆರ್‌ಟಿಬಿ- 1/2023 ದಿನಾಂಕ 13-03-2024 ರ ಹುದ್ದೆಗಳಿಗೆ ಪರೀಕ್ಷೆ, ಕನ್ನಡ ಭಾಷಾ ಪರೀಕ್ಷೆ (ಉಳಿಕೆ ಮೂಲ ವೃಂದ): 14-09-2024 (ಶನಿವಾರ ಮಧ್ಯಾಹ್ನ), ಸಾಮಾನ್ಯ ಪತ್ರಿಕೆ-I (ಉಳಿಕೆ ಮೂಲ ವೃಂದ) : 15-09-2024 (ಭಾನುವಾರ ಬೆಳಗ್ಗೆ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು / ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಉಳಿಕೆ ಮೂಲ ವೃಂದ) : 15-09-2024 (ಭಾನುವಾರ ಮಧ್ಯಾಹ್ನ) (ನಿರ್ದಿಷ್ಟ ಪತ್ರಿಕೆ)

ಅಧಿಸೂಚನೆ ಸಂಖ್ಯೆ ಪಿಎಸ್‌ಸಿ 1 ಆರ್‌ಟಿಬಿ- 2/2023 ದಿನಾಂಕ 13-03-2024 ರಂದು ಅಧಿಸೂಚಿಸಿದ ಹುದ್ದೆಗಳಿಗೆ ಪರೀಕ್ಷೆ, ಕನ್ನಡ ಭಾಷಾ ಪರೀಕ್ಷೆ (ಹೈದರಾಬಾದ್ ಕರ್ನಾಟಕ ) : 19-10-2024 (ಶನಿವಾರ ಮಧ್ಯಾಹ್ನ) ಸಾಮಾನ್ಯ ಪತ್ರಿಕೆ-I (ಹೈದರಾಬಾದ್ ಕರ್ನಾಟಕ ) : 20-10-2024 (ಭಾನುವಾರ ಬೆಳಗ್ಗೆ) ಸಾಮಾನ್ಯ ಪತ್ರಿಕೆ-I (ಹೈದರಾಬಾದ್ ಕರ್ನಾಟಕ ) : 20-10-2024 (ಭಾನುವಾರ ಬೆಳಗ್ಗೆ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು / ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಹೈದರಾಬಾದ್ ಕರ್ನಾಟಕ ) : 19-10-2024 (ಭಾನುವಾರ ಮಧ್ಯಾಹ್ನ) (ನಿರ್ದಿಷ್ಟ ಪತ್ರಿಕೆ)

ಅಧಿಸೂಚನೆ: ಇ(2) 598/ 2023-24 ಪಿಎಸ್‌ಸಿ ದಿನಾಂಕ 15-03-2024 ರಂದು ಅಧಿಸೂಚಿಸಿದ ಹುದ್ದೆಗಳಿಗೆ ಪರೀಕ್ಷೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ – 97 ಹುದ್ದೆಗಳು (ಹೈದರಾಬಾದ್ ಕರ್ನಾಟಕ) : 16-11-2024 (ಶನಿವಾರ ಮಧ್ಯಾಹ್ನ) ಕನ್ನಡ ಭಾಷಾ ಪರೀಕ್ಷೆ. 17-11-2024 (ಭಾನುವಾರ) (ಸ್ಪರ್ಧಾತ್ಮಕ ಪರೀಕ್ಷೆ)

ಅಧಿಸೂಚನೆ: ಇ(2) 597/ 2023-24 ಪಿಎಸ್‌ಸಿ ದಿನಾಂಕ 15-03-2024 ರಂದು ಅಧಿಸೂಚಿಸಿದ ಹುದ್ದೆಗಳಿಗೆ ಪರೀಕ್ಷೆ ವೇಳಾಪಟ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ – 150 ಹುದ್ದೆಗಳು (ಉಳಿಕೆ ಮೂಲ ವೃಂದ) : 07-12-2024 (ಶನಿವಾರ) (ಮಧ್ಯಾಹ್ನ) ಕನ್ನಡ ಭಾಷಾ ಪರೀಕ್ಷೆ. 08-12-2024 (ಭಾನುವಾರ) (ಸ್ಪರ್ಧಾತ್ಮಕ ಪರೀಕ್ಷೆ).