ಕರ್ನಾಟಕ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಗಸ್ಟ್​​ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಕೆಳಕಂಡ ಉದ್ಯೋಗಕ್ಕೆ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ಕೆಲಸ ಸಿಗಲಿದೆ.

ಹುದ್ದೆಯ ಮಾಹಿತಿ: ಲೀಗಲ್‌ ಟೈಪಿಸ್ಟ್‌-1, ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)-1, ವಿದ್ಯಾರ್ಹತೆ: ಲೀಗಲ್‌ ಟೈಪಿಸ್ಟ್‌- ಎಲ್‌ಎಲ್‌ಬಿ, ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)- CSE/ISನಲ್ಲಿ ಬಿಇ, ಪಿಜಿ ಡಿಪ್ಲೊಮಾ ಮಾಡಿರಬೇಕು. ವೇತನ: ಲೀಗಲ್‌ ಟೈಪಿಸ್ಟ್‌- ಮಾಸಿಕ ₹ 18,700, ಐಟಿ ಪ್ರೊಫೆಶನಲ್-2(ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)- ಮಾಸಿಕ ₹ 50,000,

ಲಿಖಿತ ಪರೀಕ್ಷೆ ಬರೆಯುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಜೊತೆಗೆ ಸಂದರ್ಶನ ಕೂಡ ಇರಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಿದೆ. ಅದರ ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್ ​kandaya.karnataka.gov.in ಗೆ ಭೇಟಿ ನೀಡಿ. ನಂತರ ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಿ. ನಂತರ ಸರಿಯಾದ ವಿಳಾಸಕ್ಕೆ ಅರ್ಜಿ ನಮೂನೆ ಕಳುಹಿಸಿ

ವಿಳಾಸ: ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ, ಪೋಡಿಯಂ ಬ್ಲಾಕ್, 3ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು-560001.