ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್ ಉದ್ಯೋಗ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ ಮಾಡಿದೆ. ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ, ತಜ್ಞ ಅಧಿಕಾರಿ ಮತ್ತು ಐಟಿ ತಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಆನ್‌ಲೈನ್‌ ಮೂಲಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.

ವಿವಿಧ ವಿಶೇಷ ಹುದ್ದೆಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕ್ ಅತ್ಯಾಕರ್ಷಕವಾದ ವೃತ್ತಿಯಲ್ಲಿ ಅವಕಾಶ ನೀಡುತ್ತಿದೆ. ಉದ್ಯೋಗದ ಹೆಸರು- ತಜ್ಞ ಅಧಿಕಾರಿ {Specialist Officer(SO)} ಒಟ್ಟು ಉದ್ಯೋಗಗಳು– 75.

ಯಾವ್ಯಾವ ಉದ್ಯೋಗಗಳು- ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ, ತಜ್ಞ ಅಧಿಕಾರಿ ಮತ್ತು ಐಟಿ ತಜ್ಞ ಹುದ್ದೆ, ಮಾಸಿಕ ವೇತನ- 48,480 ದಿಂದ 85,920 ರೂಪಾಯಿಗಳು.

ವಿದ್ಯಾರ್ಹತೆ- ಸಿಎ- (ಮೊದಲ 3 ಪ್ರಯತ್ನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು) ಎಲ್​ಎಲ್​ಎಂ, ಎಂಬಿಎ, ಇಂಜಿನಿಯರಿಂಗ್, ಎಂಸಿಎ, ಎಂಟೆಕ್​. ಆಯ್ಕೆ ಪ್ರಕ್ರಿಯೆ: ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳ ಹೆಸರು ಶಾರ್ಟ್‌ಲಿಸ್ಟ್, ಆನ್‌ಲೈನ್ ಮೂಲಕ ಸಂದರ್ಶನ.

ಈ ಹುದ್ದೆಗೆ ಸಂಬಂಧಿಸಿದ ದಿನಾಂಕ
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 22 ಮಾರ್ಚ್​​ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 25 ಮಾರ್ಚ್​​ 2025

ಈ ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು 1 ವರ್ಷದ ಕಾಲ ಪ್ರೊಬೇಷನರಿ ಅಡಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಅವರ ಕಾರ್ಯಕ್ಷಮತೆ ಪರಿಶೀಲಿಸಲಾಗುತ್ತದೆ. ಅವರ ಅವಧಿ ಪೂರ್ಣಗೊಳಿಸಿದ ನಂತರ, ಅವರನ್ನು ಬ್ಯಾಂಕಿನ ಖಾಯಂ ಉದ್ಯೋಗಿಗಳಾಗಿ ನೇಮಕ ಮಾಡಲಾಗುತ್ತದೆ. ಆಯ್ಕೆ ಆದವರು 3 ವರ್ಷದ ಸೇವಾ ಬಾಂಡ್‌ಗೆ ಸಹಿ ಹಾಕಲೇಬೇಕು. ಸಹಿ ಹಾಕಿದ ಮೇಲೆ ಮೂರು ವರ್ಷ ಪೂರ್ಣ ಕೆಲಸ ಮಾಡದಿದ್ದರೇ, ಅವರಿಗೆ ದಂಡ ವಿಧಿಸಲಾಗುತ್ತದೆ.

ಮಾಹಿತಿಗಾಗಿ– https://karnatakabank.com/careers