ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜೂನಿಯರ್‌ ಆಪರೇಟಿವ್‌ ಟ್ರೈನಿ, ನರ್ಸ್‌ ಸೇರಿ ಒಟ್ಟು 518 ಹುದ್ದೆಗಳ ಭರ್ತಿಗೆ ಜಾಬ್ ನೋಟಿಫಿಕೇಶನ್‌ ಬಿಡುಗಡೆ ಮಾಡಿದ್ದು, ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು.

ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಲ್ಯಾಬ್‌ 37 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ. ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಆಪರೇಟರ್ 226 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಐಟಿಐ. ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಫಿಟ್ಟರ್ 73 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಐಟಿಐ.

ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಎಲೆಕ್ಟ್ರಿಕಲ್ 63 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಐಟಿಐ. ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಇನ್ಟ್ರುಮೆಂಟೇಶನ್ /ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ 48 ಹುದ್ದೆ, ವಿದ್ಯಾರ್ಹತೆ: 1ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಭೂ ವಿಜ್ಞಾನಿ 4 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ. ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಎಚ್‌ಇಎಂಎಂ ಆಪರೇಟರ್ 9 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಪಿಯುಸಿ,, ಐಟಿಐ

ಸೂಪರಿಟೆಂಡೆಂಟ್‌ ಜೂನಿಯರ್‌ ಆಪರೇಟಿವ್‌ ಟ್ರೈನಿ-ಗಣಿಗಾರಿಕೆ 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ. ಸೂಪರಿಟೆಂಡೆಂಟ್‌ ಜೂನಿಯ. ಎಸ್‌ಯುಪಿಟಿ (ಜೆಒಟಿ)-ಮೋಟಾರ್ ಮೆಕ್ಯಾನಿಕ್ 22 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಐಟಿಐ. ಡ್ರೆಸ್ಸರ್ ಮತ್ತು ಪ್ರಥಮ ಚಿಕಿತ್ಸೆ- 5 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ.

ಪ್ರಯೋಗಾಲಯ ತಂತ್ರಜ್ಞ ಗ್ರೇಡ್‌ III- 2 ಹುದ್ದೆ, ವಿದ್ಯಾರ್ಹತೆ: ಪಿಯುಸಿ, ಡಿಪ್ಲೊಮಾ. ನರ್ಸ್ ಗ್ರೇಡ್ III- 7 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೊಮಾ, ಬಿ.ಎಸ್‌ಸಿ. ಫಾರ್ಮಾಸಿಸ್ಟ್ ಗ್ರೇಡ್‌ III- 6 ಹುದ್ದೆ, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೊಮಾ.

ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100. ರೂ. ಅರ್ಜಿ ಶುಲ್ಕವಿದ್ದು, ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ / ಡಿಪಾರ್ಟ್‌ಮೆಂಟಲ್‌ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು.

ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://mudira.nalcoindia.co.in/Account/LoginRecruitment.aspx) ಹುದ್ದೆ ಕುರಿತು ಹೆಚ್ಚಿನ ಮಾಹಿತಿಗಾಗಿ nalcoindia.comಗೆ ಭೇಟಿ ನೀಡಿ.