ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 75 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವೀಧರ ಅಪ್ರೆಂಟಿಸ್ ಟ್ರೈನಿ ಹಾಗೂ ಡಿಪ್ಲೊಮಾ ಅಪ್ರೆಂಟಿಸ್ ಟ್ರೈನಿ ಹುದ್ದೆಗಳು ಖಾಲಿ ಇದೆ . ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಪದವೀಧರ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ, ಡಿಪ್ಲೊಮಾ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಟ್ರೇಡ್ ಐಟಿಐಗಳಿಗೆ ಐಟಿಐ ಪದವಿ ಪೂರ್ಣಗೊಳಿಸಿರಬೇಕು.
ವೇತನ: ಪದವೀಧರ ಅಪ್ರೆಂಟಿಸ್ ಟ್ರೈನಿಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ 9 ಸಾವಿರ ಗೌರವ ವೇತನ ಹಾಗೂ ಡಿಪ್ಲೊಮಾ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ 8 ಸಾವಿರ ಗೌರವ ವೇತನ ಹಾಗೂ ಟ್ರೇಡ್ ಐಟಿಐಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ 7 ಸಾವಿರ ಗೌರವಧನ ನಿಗದಿ ಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಎನ್ಎಟಿಎಸ್ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಬಳಿಕ ಅಗತ್ಯ ದಾಖಲಾತಿಯೊಂದಿಗೆ ಹುದ್ದೆಗೆ ಅರ್ಜಿಯನ್ನು ಈ ಇಮೇಲ್ ಆಡ್ರೆಸ್ ಗೆ [email protected] ಮೇಲ್ ಕಳುಹಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಮೇ 20 ಮತ್ತು 21ರಂದು ಸಂದರ್ಶನ ನಡೆಯಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಏಪ್ರಿಲ್ 21 ಕೊನೆಯ ದಿನ ಆಗಿದ್ದು, ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು isro.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

