ಕಾರ್ಕಳ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಅತಿ ಕ್ಲಿಷ್ಟಕರವೆನಿಸಿದ ಪರೀಕ್ಷೆಗಳಲ್ಲೊಂದಾದ ಜೆಇಇ ಮೈನ್ಸ್ (ಸೆಷನ್-2) 2026 ನೇ ಸಾಲಿನ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 3 ಮಂದಿ ವಿದ್ಯಾರ್ಥಿಗಳು 99 ಪರ್ಸೆಂಟ್ ಗಿಂತ ಅಧಿಕ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಗೈದು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ತೇರ್ಗಡೆಯನ್ನು ಹೊಂದಿದ್ದಾರೆ.
ವಿದ್ಯಾರ್ಥಿಗಳಾದ ನಮಿತ್ ಕೃಷ್ಣಮೂರ್ತಿ ಹೆಗಡೆ 99.49 ಪರ್ಸೆಂಟ್, ನಾಗದೇವ್ ಎಂ.ಜಿ. – 99.59 ಪರ್ಸೆಂಟ್, ಪ್ರಥಮ್ ತಮ್ಮಣ್ಣ ಗೌಡರ್ – 99.14 ಪರ್ಸೆಂಟ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಶ್ರೇಣಿಗಳಿಸಿದ್ದಾರೆ.
ಬಸವರೆಡ್ಡಿ ವಿಷ್ಣುರೆಡ್ಡಿ – 98.98, ತೇಜಸ್ ಆರ್. ಬಿ.- 98.96, ನಿನಾದ್ ರಾಜೇಶ್ ನಾಯ್ಕ್- 98.94, ಧನುಷ್ ಹೆಚ್. ಎ.- 98.86, ಸಂವಿತ್‌ಅಮಿತ್ ಗೋಕರ್ಣ- 98.57, ದೃಶ್ಯ್ 98.41, ಸುಕ್ಷಿತ್ ಗಿರೀಶ್ ಗೌಡ- 98.35, ತೇಜಸ್ ಎನ್. ಇ. – 98.34, ತೇಜಸ್ ಹೆಗಡೆ ಎಚ್. ಡಿ.-98.19, ಅಕ್ಷತಾ ಮೋಹನ್ ಹೆಗಡೆ -98.16, ಪ್ರಜ್ವಲ್ ಭಟ್- 98.04, ವಿಶ್ವೇಶ್ ಎನ್. ಎಚ್.98.03 ಪರ್ಸೆಂಟ್ ಗಳನ್ನು ಪಡೆದುಕೊಂಡಿದ್ದಾರೆ.
99 ಪರ್ಸೆಂಟ್ ಗಿಂತ ಅಧಿಕ 03 ಮಂದಿ ವಿದ್ಯಾರ್ಥಿಗಳು, 98 ಪರ್ಸೆಂಟ್ ಗಿಂತ ಅಧಿಕ 15ವಿದ್ಯಾರ್ಥಿಗಳು, 95 ಪರ್ಸೆಂಟ್ ಗಿಂತ ಅಧಿಕ 51 ವಿದ್ಯಾರ್ಥಿಗಳು, 90 ಪರ್ಸೆಂಟ್ ಗಿಂತ ಅಧಿಕ 114 ವಿದ್ಯಾರ್ಥಿಗಳು ಅಂಕಗಳನ್ನು ಪಡೆದುಕೊಂಡು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ.
ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ಜೆಇಇ ಪರೀಕ್ಷೆಯ ಸಂಯೋಜಕರಾದ ಶ್ರೀ ನಂದೀಶ್ ಅಭಿನಂದಿಸಿ ಮುಂದಿನ ಹಂತದ ಪರೀಕ್ಷೆಗೆ ಶುಭ ಹಾರೈಸಿದ್ದಾರೆ.

