ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ಯೋಗ – ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಡಿಸೆಂಬರ್ 13 ರಂದು ಭಾರತೀಯ ಜ್ಞಾನ ಮತ್ತು ಸಂಸ್ಕೃತ ಪರಂಪರೆಯ ಮೂಲಕ ಸುಸ್ಥಿರತೆಯ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

2021ರಲ್ಲಿ ಪ್ರಾರಂಭವಾದ ಸಂಸ್ಕೃತ ವಿಭಾಗದಲ್ಲಿ 90 ಕ್ಕೂ ಅಧಿಕ ವಿದ್ಯಾರ್ಥಿಗಳು ಪಿ.ಹೆಚ್.ಡಿ. ಸಂಶೋಧನೆಯನ್ನು ಮಾಡುತ್ತಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯವು ಸಂಸ್ಕೃತ ಭಾಷೆಯ ಕುರಿತಾದ ಮೊದಲ ಅಂತರರಾಷ್ಟ್ರೀಯ ಸಮ್ಮೇಳನವನ್ನು 2023 ರಲ್ಲಿ ಹಾಗೂ ದ್ವಿತೀಯ ಅಂತರರಾಷ್ಟ್ರೀಯ ಸಮ್ಮೇಳನವನ್ನು 2024 ರಲ್ಲಿ ಆಯೋಜಿಸಿತ್ತು. ಭಾರತೀಯ ಜ್ಞಾನ ಮತ್ತು ಸಂಸ್ಕೃತ ಪರಂಪರೆಯ ಕುರಿತಾದ ಮೂರನೇ ಆವೃತ್ತಿಯ ಅಂತರರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ, ಡಿಸೆಂಬರ್ 13 ರಂದು, ಮುಕ್ಕ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ.

ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ.ರಾಘವೇಂದ್ರ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ ಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಆಶೀರ್ವಚನ ಮಾಡಲಿದ್ದಾರೆ.

ಉತ್ತರ ಪ್ರದೇಶದ ಸಂಸ್ಕೃತಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳು ಹಾಗೂ ಗೋಸ್ವಾಲ್ ಆಯುರ್ವೇದ – ಜೀವ ವಿಜ್ಞಾನ ಶಾಸ್ತ್ರ ಸಂಸ್ಥೆಯ ಸಂಸ್ಥಾಪಕರಾದ ಡಾ. ತನ್ಮಯ್ ಗೋಸ್ವಾಮಿ, ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ಮತ್ತು ನೇಪಾಳದ ಮಾದೇಶ್ ವಿಶ್ವವಿದ್ಯಾಲಯದ ಡೀನ್ ಪ್ರೊ. ಡಾ. ಅಂಜಯ್ ಕುಮಾರ್ ಮಿಶ್ರಾ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರುಗಳಾದ ಎ. ವಿಜಯಲಕ್ಷ್ಮಿ ಆರ್. ರಾವ್ ಹಾಗೂ ಪ್ರೊ. ಎ. ಮಿತ್ರ ಎಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಬೆಂಗಳೂರಿನ ಪ್ರಸಿದ್ಧ ಕ್ಯಾನ್ಸರ್ ತಜ್ಞರು ಹಾಗೂ ವೈದ್ಯರಾದ ಪ್ರೊ. ಡಾ. ಉದಯ ಕುಮಾರ್ ಮಯ್ಯ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಸಂಚಾಲಕರು ಹಾಗೂ ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಪ್ರೊ. ಡಾ. ಎ. ಆರ್. ಶಬರಾಯ ಮತ್ತು ಸಂಚಾಲಕರು ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಪ್ರೊ. ಡಾ. ಪ್ರವೀಣ್ ಬಿ. ಎಂ., ಹಾಗೂ ಸಂಯೋಜಕರಾದ ಪ್ರೊ. ಡಾ. ಬಿ. ಗೋಪಾಲಾಚಾರ್, ಪ್ರೊ. ಡಾ. ಗಣಪತಿ ಭಟ್, ಪ್ರೊ. ಡಾ. ಸೋಂದಾ ಭಾಸ್ಕರ್ ಭಟ್, ಪ್ರೊ. ಡಾ. ಅರವಿಂದ ಶಾನಭಾಗ್, ಪ್ರೊ. ಡಾ. ಶಂಕರನಾರಾಯಣ ಭಟ್ ಮತ್ತು ಪ್ರೊ. ಡಾ. ದಿವಾಕರ ಭಟ್ ರವರು ಉಪಸ್ಥಿತರಿರಲಿದ್ದಾರೆ.

ದೇಶ ವಿದೇಶಗಳಿಂದ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು ಮತ್ತು ಸಂಶೋಧಕರು ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಂಸ್ಕೃತ ಮತ್ತು ಆರೋಗ್ಯ ವಿಜ್ಞಾನ, ಭಾರತೀಯ ವೈದ್ಯಕೀಯ ಪದ್ಧತಿಗಳು, ಪ್ರಾಚೀನ ಭಾರತೀಯ ವಾಸ್ತುಶಿಲ್ಪ ಮತ್ತು ವಾಸ್ತು, ಪ್ರಾಚೀನ ಭಾರತೀಯ ಖಗೋಳ ವಿಜ್ಞಾನ ಮತ್ತು ಖಗೋಳ ಶಾಸ್ತ್ರ, ಪರಿಸರ ಸಂರಕ್ಷಣೆಯೊಂದಿಗೆ ಸಂಸ್ಕೃತ ಮತ್ತು ಕೃಷಿ, ಸಂಸ್ಕೃತ ಮತ್ತು ಮನೋವಿಜ್ಞಾನ, ಪ್ರಕೃತಿ ಚಿಕಿತ್ಸಾ ಪದ್ಧತಿ / ನ್ಯಾಚುರೋಪಥಿ, ಯೋಗ, ಆಯುರ್ವೇದ, ವೇದ, ಪುರಾಣ, ಭಗವದ್ಗೀತೆ, ಉಪನಿಷತ್ತುಗಳು, ಭಾರತದ ಮಹಾಕಾವ್ಯಗಳು, ನಾಟ್ಯಶಾಸ್ತ್ರ ಮತ್ತು ಸಂಗೀತ ಶಾಸ್ತ್ರ ವಿಷಯಗಳಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ.

ಈ ಸಮ್ಮೇಳನದಲ್ಲಿ ಸಂಸ್ಕೃತ ಭಾಷೆಯ ಮೌಲ್ಯ, ಭಾರತೀಯ ಸಂಸ್ಕೃತಿ, ಕಲಾ ಪರಂಪರೆಯನ್ನು ಯುವ ಜನತೆಯು ತಿಳಿದುಕೊಳ್ಳಲು ಮತ್ತು ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸುವ ಉದ್ದೇಶದಿಂದ, ಪಿಯುಸಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ನೃತ್ಯ, ಗೀತೆ, ಶ್ಲೋಕ ಪಠಣ, ವಾದ್ಯ, ವಾದನ ಹಾಗೂ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನಗಳನ್ನು ಒಳಗೊಂಡಿರುವ “ಸಂಸ್ಕೃತ–ಸಂಸ್ಕೃತಿ ಉತ್ಸವ: ಎ ಕಲ್ಚರಲ್ ಶೋ” ಎಂಬ ವಿಶೇಷ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪ್ರತಿ ತಂಡದಲ್ಲಿ ಗರಿಷ್ಠ 10 ವಿದ್ಯಾರ್ಥಿಗಳು ಇರಲಿದ್ದಾರೆ. ಪ್ರತಿ ತಂಡಕ್ಕೆ 15 ನಿಮಿಷ ಪ್ರದರ್ಶನ ಸಮಯವನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಅತ್ಯುತ್ತಮ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವುದು. ಹಾಗೂ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿನ ಸಂಸ್ಕೃತ ಭಾಷಾ ಅರಿವು ಮತ್ತು ಭಾರತೀಯ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಹಾಗೂ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಲು ಈ ಸಮ್ಮೇಳನವು ನೆರವಾಗಲಿದೆ.

ಸಮಾರೋಪ ಸಮಾರಂಭವು ಸಂಜೆ 4 ಗಂಟೆಗೆ ನಡೆಯಲಿದೆ. ನೇಪಾಳದ ತ್ರಿಭುವನ್ ವಿಶ್ವವಿದ್ಯಾಲಯದ ಮದನ್ ಭಂಡಾರಿ ಮೆಮೋರಿಯಲ್ ಕಾಲೇಜಿನ ಕ್ಯಾಂಪಸ್ ಸಹ-ಮುಖ್ಯಸ್ಥರಾದ ಡಾ. ತಾರಾ ಪ್ರಸಾದ್ ಗೌತಮ್ ಮತ್ತು ನೇಪಾಳದ ಮಧೇಶ ಪ್ರಾಂತ ಸರ್ಕಾರದ ಪ್ರಾಂತೀಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರಾದ ಡಾ. ಶಿಹಾ ಮಿಶ್ರಾ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ತುಳುನಾಡಿನ ಪುರಾತನ ವಸ್ತುಗಳು, ಗ್ರಾಮೀಣ ಸಾಮಗ್ರಿಗಳು, ಮತ್ತು ಪ್ರಾಚೀನ ನಾಣ್ಯ ಹಾಗೂ ನೋಟುಗಳ ಬೃಹತ್ ವೈಭವದ ವಸ್ತು ಪ್ರದರ್ಶನವನ್ನು ಕೂಡಾ ಆಯೋಜಿಸಲಾಗಿದೆ. ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ವಸ್ತು ಪ್ರದರ್ಶನವನ್ನು ವೀಕ್ಷಿಸಬಹುದು.

ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಮತ್ತು ಸ್ಮರಣೀಯವಾಗಿಸುವ ಆಯೋಜಿಸುವ ಹಂಬಲದೊಂದಿಗೆ, ಈ ಕಾರ್ಯಕ್ರಮದ ಕುರಿತು ತಮ್ಮ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವನ್ನು ನೀಡುವುದರ ಮೂಲಕ ತಾವು ಸಹಕಾರವನ್ನು ನೀಡಬೇಕು ಎಂದು ವಿನಂತಿಸುತ್ತಿದ್ದೇವೆ. ಶನಿವಾರ ಡಿಸೆಂಬರ್ 13 ರಂದು ಬೆಳಿಗ್ಗೆ 9.30 ಕ್ಕೆ ಮುಕ್ಕದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಹಾಗೂ ವಸ್ತು ಪ್ರದರ್ಶಕ್ಕೆ ತಮ್ಮೆಲ್ಲರನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಉಪಕುಲಪತಿಗಳು, ಶ್ರೀನಿವಾಸ್ ವಿಶ್ವವಿದ್ಯಾಲಯ. ಡಾ. ಅನಿಲ್ ಕುಮಾರ್, ಕುಲಸಚಿವರು, ಶ್ರೀನಿವಾಸ್ ವಿಶ್ವವಿದ್ಯಾಲಯ. ಪ್ರೊ. ಡಾ. ಪ್ರವೀಣ್ ಬಿ. ಎಂ., ಕಾರ್ಯಕ್ರಮದ ಸಂಚಾಲಕರು ಹಾಗೂ ನಿರ್ದೇಶಕರು – ಸಂಶೋಧನಾ ವಿಭಾಗ ಶ್ರೀನಿವಾಸ್ ವಿಶ್ವವಿದ್ಯಾಲಯ. ಪ್ರೊ. ಡಾ. ಎ. ಆರ್. ಶಬರಾಯ, ಕಾರ್ಯಕ್ರಮದ ಸಂಚಾಲಕರು ಹಾಗೂ ಪ್ರಾಂಶುಪಾಲರು, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ. ಪ್ರೊ. ಕೆ. ಶ್ರೀನಾಥ್ ರಾವ್, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮುಕ್ಕ ಉಪಸ್ಥಿತರಿದ್ದರು.