ವಿದ್ಯಾರ್ಥಿ ವೇತನಕ್ಕಾಗಿ ಇನ್ಫೋಸಿಸ್ ಸಂಸ್ಥೆ ಅರ್ಜಿಗಳನ್ನು ಆಹ್ವಾನ ಮಾಡಿದ್ದು ಆಗಸ್ಟ್ 15ರ ಒಳಗೆ ಆಸಕ್ತ ಮಹಿಳಾ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದಾಗಿದೆ. ಇನ್ಫೋಸಿಸ್ ಫೌಂಡೇಷನ್ ಎಸ್‌ಟಿಇಎಂ ಸ್ಟಾರ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಮ್ 2024-25ರ ಸಾಲಿನ ಅರ್ಜಿಗಳನ್ನ ಆಹ್ವಾನ ಮಾಡಿದೆ.
ಇಂಜಿನಿಯರಿಂಗ್, ಎಂಬಿಬಿಎಸ್, ಗಣಿತ, ತಂತ್ರಜ್ಞಾನ, ವಿಜ್ಞಾನ ವಿಷಯಗಳಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದ ಮಹಿಳಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಪ್ರತಿ ವಿದ್ಯಾರ್ಥಿನಿಯರಿಗೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಇದೇ 15 ಕೊನೆ ದಿನಾಂಕ ಆಗಿದ್ದು ವಿದ್ಯಾರ್ಥಿನಿಯರು ಆನ್ಲೈನ್ ಮೂಲಕ ಅಪ್ಲೇ ಮಾಡಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಆಧಾರ್/ಪಾನ್ ಕಾರ್ಡ್, ದ್ವಿತಿಯ ಪಿಯುಸಿಯ ಪ್ರಮಾಣ ಪತ್ರ, ಜೆಇಇ/ಸಿಇಟಿ/ ನೀಟ್ನಲ್ಲಿ ಪಡೆದ ಮಾರ್ಕ್ಸ್ಶೀಟ್, ಸದ್ಯ ಅಡ್ಮಿಷನ್ ಆದ ಪದವಿಯ ಪ್ರಮಾಣ ಪತ್ರ, ಪಾಸ್ ಫೋಟೋಗಳು, ಆದಾಯ ಪ್ರಮಾಣ ಪತ್ರ, ಕರೆಂಟ್ ಬಿಲ್, ಬ್ಯಾಂಕ್ ಅಕೌಂಟ್ ಮಾಹಿತಿ. ವಿದ್ಯಾರ್ಥಿನಿಯರು ಅಪ್ಲೇ ಮಾಡಬೇಕು ಎಂದರೆ ಈ ಲಿಂಕ್ಗೆ ಭೇಟಿ ಕೊಡಿ- ವೆಬ್‌ಸೈಟ್ https://www.buddy4study.com/page/infosys-stem-stars-scholarship
ಅರ್ಜಿ ಹಾಕಲು ವಿದ್ಯಾರ್ಥಿನಿಯರಿಗೆ ಏನೇನು ಅರ್ಹತೆಗಳು ಇರಬೇಕು: ಭಾರತೀಯ ವಿದ್ಯಾರ್ಥಿನಿ ಆಗಿರಬೇಕು. ವಿಜ್ಞಾನ, ಗಣಿತ ವಿಭಾಗದ 4 ವರ್ಷದ ಪದವಿಗೆ ಇದೇ ವರ್ಷ ಅಡ್ಮಿಷನ್ ಆಗಿರಬೇಕು. ಬೇರೆ ಸ್ಕಾಲರ್ಶಿಪ್ಗಳನ್ನ ಪಡೆದಿರಬಾರದು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಳಿಗಿಂತ ಹೆಚ್ಚಿರಬಾರದು. ಪದವಿಯ 4 ವರ್ಷ ಯಾವುದೇ ವಿಷಯದಲ್ಲಿ ಫೇಲ್ ಆಗಬಾರದು.

