ಮಂಗಳೂರು: ಜುಲೈ 30ರ ಇಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಪ್ಲೇಸ್ಮೆಂಟ್ ಸೆಲ್, ಆಂತರಿಕ ಗುಣಮಟ್ಟ ಖಾತರಿ ಕೋಶ, ಶಿಕ್ಷಕ ರಕ್ಷಕ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಹಯೋಗದಲ್ಲಿ ಉದ್ಯೋಗ ಮೇಳ ವನ್ನು ಆಯೋಜಿಸಲಾಯಿತು.
Whatsapp Image 2024 07 30 At 4.05.24 Pm

ಅಜಿತ್ ಎಂಟರ್‌ಪ್ರೈಸ್, ಸಿಐಐ ಮಂಗಳೂರು ಮತ್ತು ವ್ಯವಸ್ಥಾಪಕ ನಿರ್ದೇಶಕರು,ಹಾಗೂ ಉಪಾಧ್ಯಕ್ಷರಾದ ಶ್ರೀಯುತ ಅಜಿತ್ ಕಾಮತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ “ಕಾಲ ಬದಲಾದಂತೆ ಉದ್ಯೋಗದ ಸ್ವರೂಪವು ಬದಲಾಗುತ್ತಿದೆ. ಹಾಗಾಗಿ ಉದ್ಯೋಕಾಂಕ್ಷಿಗಳು ಬದಲಾದ ಉದ್ಯೋಗದ ಅವಶ್ಯಕತೆಗಳಿಗನುಗುಣವಾಗಿ ಸೂಕ್ತ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಹೇಳಿದರು.
Whatsapp Image 2024 07 30 At 4.05.37 Pm

ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್ ಅಧ್ಯಕ್ಷತೆ ವಹಿಸಿ ಮಾತನಾಡಿ “ತನ್ನ ವಿದ್ಯಾಸಂಸ್ಥೆಗಳಲ್ಲಿ ಕಲಿತ ಮೇಳದ ವಿದ್ಯಾರ್ಥಿಗಳು ಹಾಗೂ ಅರ್ಹ ವಿದ್ಯಾ ವಂತರಿಗೆ ಸೂಕ್ತ ಉದ್ಯೋಗಾವಕಾಶ ಗಳನ್ನು ಕಲ್ಪಿಸಿಕೊಡುವುದು ಪ್ರತಿ ವಿದ್ಯಾಸಂಸ್ಥೆಯ ಹೊಣೆಗಾರಿಕೆ” ಎಂದು ಹೇಳಿದರು.

Whatsapp Image 2024 07 30 At 4.05.27 Pm

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಯುತ ಮೆಲ್ವಿನ್ ವಾಸ್, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದ ಗುರು. ಉದಯ ಫೆರ್ನಾಂಡಿಸ್, ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪ್ಯಾಟ್ಸಿ ವಾಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಿಯನಾ ಡಿ’ಕುನ್ಹಾ, ಉಪಸ್ಥಿತರಿದ್ದರು.

Whatsapp Image 2024 07 30 At 4.06.29 Pm

ಸುಮಾರು 63 ಕಂಪೆನಿಗಳ ಭಾಗವಹಿಸುವಿಕೆ, ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನೊಳಗೊಂಡಂತೆ ಸುಮಾರು 1,700 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹಾಗೂ ಉದ್ಯೋಗದಾತರು ಈ ಉದ್ಯೋಗಮೇಳದ ಪ್ರಯೋಜನವನ್ನು ಪಡೆದರು.

Whatsapp Image 2024 07 30 At 4.06.39 Pm

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ರೆ| ಡಾ | ಮೈಕೆಲ್, ಸಾಂತುಮಯೋರ್ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಉಪನ್ಯಾಸಕಿ ಹಾಗೂ ಮುಖ್ಯಸ್ಥೆ ಶ್ರೀಮತಿ ಗ್ಲಾನ್ಸಿಯ ಕಾರ್ಯಕ್ರಮ ನಿರೂಪಿಸಿ, ಪ್ಲೇಸ್‌ಮೆಂಟ್ ಅಧಿಕಾರಿ ಅದಿರಾ ವಂದಿಸಿದರು.