ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಕೊಡಿಯಲ್ ಬೈಲ್ ಇವರ ಆಶ್ರಯದಲ್ಲಿ ಪ್ರೌಢಶಾಲಾ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ “ಎಕ್ಸ್‌ಲರೇಟ್ 2025″ ಎಂಬ ‘ಸೈನ್ಸ್ ಫೆಸ್ಟ್’ ಕಾರ್ಯಕ್ರಮವನ್ನು ಅಕ್ಟೋಬರ್ 18, 2025 ರಂದು ನಡೆಯಲಿದೆ.

ವಿಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ ಅವರಲ್ಲಿನ ಚಿಂತನಾ ಕೌಶಲ್ಯವನ್ನು ಒರೆಗೆ ಹಚ್ಚುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ “ಎಕ್ಸ್-ಕ್ವಿಝ್ ಇಟ್”, ಕೃತಕ ಬುದ್ಧಿಮತ್ತೆ (Al) ಕಾರ್ಯಾಗಾರ “ಎಕ್ಸ್-ಇಸ್ಟೆಟ್”, ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ “ಎಕ್ಸ್-ಝಬಿಟ್” ಹಾಗೂ ಸಂವಾದಾತ್ಮಕ ಡೆಮೊ “ಎಕ್ಸ್-ಸೈಟ್” ಎಂಬ ನಾಲ್ಕು ಮಾದರಿಯ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರತಿಯೊಂದು ಶಾಲೆಯಿಂದ ಒಟ್ಟು 8 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿಯೊಂದು ವಿಭಾಗದಲ್ಲಿ 2 ವಿದ್ಯಾರ್ಥಿಗಳ ಒಂದು ತಂಡದಂತೆ ಒಟ್ಟು 4 ವಿಭಾಗಗಳಲ್ಲಿ 4 ತಂಡಗಳು.

ಆನ್‌ಲೈನ್ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು (xcelerate expertedu.co.in) ನೋಂದಾಯಿಸಲು ಸೆ. 20 ಕೊನೆಯ ದಿನವಾಗಿರುತ್ತದೆ. ಸೋಂದಾಯಿತ ತಂಡಕ್ಕೆ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಿ ಮರಸ್ಕರಿಸಲಾಗುತ್ತದೆ. ಅತೀ ಹೆಚ್ಚು ಅಂಕ ಪಡೆದ ಶಾಲೆಗೆ ಸಮಗ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೊಸ ವಿಚಾರ, ವಿಧಾನ ಹಾಗೂ ತಂತ್ರವನ್ನು ಮೊದಲಿಗೆ ಪರಿಚಯಿಸುವ ಮೂಲಕ ಟ್ರಯಲ್‌ಬ್ರೇಜರ್ ಎಂದು ಹೆಸರುವಾಸಿಯಾದ ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯು, ಮೊದಲ ಬಾರಿಗೆ ಈ ರೀತಿಯ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಮೌಲ್ಯಾಧಾರಿತ ಶಿಕ್ಷಣ, ತತ್ವಚಿಂತನೆಯ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿನ ಕುತೂಹಲಭರಿತ ಮನಸ್ಸುಗಳನ್ನು ಬೆಳೆಸಿ ಪೋಷಿಸುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ.

ಎಕ್ಸ್‌ಸೆಲರೇಟ್ ಎಂಬುದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ವಿಜ್ಞಾನ ಉತ್ಸವವಾಗಿದ್ದು, ಯುವ ಮನಸ್ಸುಗಳಿಗೆ ವಿಜ್ಞಾನದ ರೋಮಾಂಚಕಾರಿ ಜಗತ್ತನ್ನು ಮತ್ತು ವಿಜ್ಞಾನವು ನಿಜ ಜೀವನದಲ್ಲಿ ಹೇಗೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅನ್ವೇಷಿಸಲು ಅವಕಾಶವನ್ನು ನೀಡುತ್ತದೆ. ಎಂದು ಸಂಘಟಕರಾದ ನರೇಂದ್ರ ನಾಯಕ್ , ಉಷಾಪ್ರಭಾ ,ಅಂಕುಶ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.