ಮಂಗಳೂರು: ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೆ. 20 ರಿಂದಲೇ ಮಧ್ಯಾವಧಿ (ದಸರಾ ರಜೆ) ಆರಂಭವಾಗಲಿದೆ.
ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ. 20 ರಿಂದ ದಸರಾ ರಜೆ ಆರಂಭಗೊಂಡು ಅಕ್ಟೋಬರ್ 6ರ ವರೆಗೂ ಇರಲಿದೆ. ಅ. 7ರಿಂದ ಶಾಲೆಗಳು ಪುನರ್ ಆರಂಭವಾಗಲಿದೆ.
ಅವಿಭಜಿತ ದ.ಕ. ಜಿಲ್ಲೆಯ ಸಿಬಿಎಸ್‌ಇ ಶಾಲೆಗಳಲ್ಲಿ ಸೆ. 20ರಿಂದ ಮಧ್ಯಾವಧಿ ರಜೆ ಆರಂಭವಾಗಿ ಅ. 2ರ ವರೆಗೂ ಇರಲಿದೆ. ಅ. 3ರಿಂದ ತರಗತಿಗಳು ಪುನಃ ಆರಂಭವಾಗಲಿದೆ.

