ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನೊಳಗೊಂಡ ವಿಕಸಿತ ಭಾರತ ಯುವ ಸಂಸತ್ತು ಕಾರ್ಯಕ್ರಮವು ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ಮಂಗಳೂರಿನಲ್ಲಿ ನಡೆಯಲಿದ್ದು ಸಂಘಟಕರಾದ ಸಿಸ್ಟೆರ್ ವೆನಿಸ ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಮಾಹಿತಿಯನ್ನ ನೀಡಿದರು.
ದೇಶದ 300ಕ್ಕೂ ಹೆಚ್ಚು ನೋಡಲ್ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕೇಂದ್ರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್, ನೆಹರು ಯುವ ಕೇಂದ್ರ ಹಾಗು ಮಂಗಳೂರು ವಿಶ್ವ ವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸಂತ ಆಗ್ನೆಸ್ ಕಾಲೇಜು (ಸ್ಯಾಯತ್ರ) ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
18 ರಿಂದ 25 ವರ್ಷದೊಳಗಿನ ಯುವಜನರು ಮಾರ್ಚ್ 9ರೊಳಗೆ ಮೈ ಭಾರತ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಮೊದಲ ಹಂತದಲ್ಲಿ ‘ತಮ್ಮ ದೃಷ್ಟಿಯಲ್ಲಿ ವಿಕಾಸ ಭಾರತವೆಂದರೆ ಏನೆಂಬ ವಿಷಯದ ಕುರಿತು ಒಂದು ನಿಮಿಷದ ವೀಡಿಯೋ ಅಪ್‌ಲೋಡ್ ಮಾಡಬೇಕು. ಎರಡನೇ ಹಂತದಲ್ಲಿ ಈ ವಿಡಿಯೋ ತುಣುಕುಗಳನ್ನು ಸ್ಕಿನಿಂಗ್ ಕಮಿಟಿಯವರು ಮಾ. 10ರ ನಂತರ ಮೂರು ಜಿಲ್ಲೆಗಳಿಂದ ತಲಾ 50ರಂತೆ 150 ಯುವಜನರನ್ನು ಆಯ್ಕೆ ಮಾಡಲಿದ್ದಾರೆ.
ಆಯ್ಕೆಗೊಂಡ 150 ಯುವಜನರು “ಒಂದು ದೇಶ ಒಂದು ಚುನಾವಣೆ’ ಎಂಬ ವಿಷಯದ ಕುರಿತು ಪ್ರತೀ ಸ್ಪರ್ಧಿಗೆ ಮೂರು ನಿಮಿಷಗಳ ಭಾಷಣ ಸ್ಪರ್ಧೆಯನ್ನು ಸಂತ ಆಗ್ನೆಸ್ ಕಾಲೇಜು (ಸ್ನಾಯತ್ರ), ಮಂಗಳೂರಿನಲ್ಲಿ ದಿನಾಂಕ 15 ಮತ್ತು 16ರ ಮಾರ್ಚ್ 2025 ರಂದು ನಡೆಸಲಾಗುತ್ತದೆ.
ಐವರು ತೀರ್ಪುಗಾರರ ಸಮಿತಿಯು ಹತ್ತು ವಿಜೇತರನ್ನು ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಿದೆ ಯುವ ಸಮೂಹಕ್ಕೆ ದೇಶದ ಸಂವಿಧಾನ ಸಂಸತ್ತಿನ ಕುರಿತು ಅರಿವು ಉಂಟು ಮಾಡುವ ಉದ್ದೇಶ ಇದರದ್ದಾಗಿದೆ ಎಂದರು.

