ಬೆಂಗಳೂರು: ಎನ್​​ಟಿಯ ಸಿಯುಇಟಿ ಯುಜಿ ಫಲಿತಾಂಶವನ್ನು ಪ್ರಕಟಿಸಿದೆ. ಪದವಿಪೂರ್ವ ಕೋರ್ಸ್​ಗಳಿಗೆ ಸೇರಲು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು cuetug.ntaonline.in ವೆಬ್​​ಸೈಟ್​ನಲ್ಲಿ ಅಂಕಗಳನ್ನು ಪರಿಶೀಲಿಸಬಹುದು.

ಸಿಯುಇಟಿ ಯುಜಿ ಫಲಿತಾಂಶಗಳನ್ನು exams.nta.ac.in/CUET-UG/ ನಲ್ಲಿ ಪರಿಶೀಲಿಸಬಹುದು. ಸಿಯುಇಟಿ ಯುಜಿ ಪರೀಕ್ಷೆಯನ್ನು ಮೇ 15, 16, 17, 18, 21, 22, 24 ಮತ್ತು 29 ರಂದು ವಿದೇಶದ 26 ನಗರಗಳು ಸೇರಿದಂತೆ 379 ನಗರಗಳಲ್ಲಿರುವ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ.

ಒಟ್ಟು 13.48 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜುಲೈ 19, 2024 ರಂದು ಮರು ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 7 ರಂದು ಬಿಡುಗಡೆ ಮಾಡಲಾಗಿತ್ತು. ಆಕ್ಷೇಪಣೆ ವಿಂಡೋವನ್ನು ಜುಲೈ 9, 2024 ರಂದು ಮುಚ್ಚಿದ್ದರು.

ಫಲಿತಾಂಶಗಳ ಜೊತೆಗೆ ಏಜೆನ್ಸಿ ಅಂತಿಮ ಉತ್ತರ ಕೀಯನ್ನು ಸಹ ಬಿಡುಗಡೆ ಮಾಡಿದೆ. ತಾತ್ಕಾಲಿಕ ಉತ್ತರ ಕೀ ವಿರುದ್ಧ ಅಭ್ಯರ್ಥಿಗಳು ಹಾಕಿದ ಪ್ರಶ್ನೆಗಳ ಆಧಾರದ ಮೇಲೆ ಅಂತಿಮ ಉತ್ತರ ಕೀಯನ್ನು ಸಿದ್ಧಪಡಿಸಲಾಗಿದೆ.

ತಜ್ಞರ ಸಮಿತಿಯು ಸವಾಲುಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿದೆ. ಪರಿಷ್ಕೃತ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಿ ಘೋಷಿಸಲಾಗಿದೆ.

 ಫಲಿತಾಂಶಗಳನ್ನು ಪರಿಶೀಲಿಸುವ ವಿಧಾನ: 

· exams.nta.ac.in/CUET-UG/ ನಲ್ಲಿ ಸಿಯುಇಟಿ ಯುಜಿಯ ಅಧಿಕೃತ ವೆಬ್​​ಸೈಟ್​ಗೆ ಭೇಟಿ ನೀಡಬಹುದು.
· ಮುಖಪುಟದಲ್ಲಿ ಲಭ್ಯವಿರುವ ಸಿಯುಇಟಿ ಯುಜಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
· ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
· ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
· ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ಲೋಡ್ ಮಾಡಿ.
· ಹೆಚ್ಚಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ.
ವಿವರಗಳಿಗಾಗಿ ಅಭ್ಯರ್ಥಿಗಳು ಸಿಯುಇಟಿ ಯುಜಿಯ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಬಹುದು.