ಮಂಗಳೂರು: ನಿಟ್ಟೆ ವೃತ್ತಿಪರ ಶಿಕ್ಷಣ ಸಂಸ್ಥೆ, ಎಐಸಿ ನಿಟ್ಟೆ ಇನ್ಕ್ಯುಬೇಷನ್ ಕೇಂದ್ರ, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಸಹಯೋಗದೊಂದಿಗೆ ಡಿಸೆಂಬರ್ 15 ಮತ್ತು 16, 2025 ರಂದು ನಿಟ್ಟೆ ವೃತ್ತಿಪರ ಶಿಕ್ಷಣ ಸಂಸ್ಥೆ, ಪಡೀಲ್ ಕ್ಯಾಂಪಸ್, ಮಂಗಳೂರಿನಲ್ಲಿ ವಿಶಿಷ್ಟವಾದ ಎರಡು ದಿನಗಳ “ಎಂಎಸ್‌ಎಂಇ ಮತ್ತು ಸ್ಟಾರ್ಟ್ಅಪ್ ಬೂಟ್ ಕ್ಯಾಂಪ್” ಅನ್ನು ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮ ನಿರ್ದೇಶಕರಾದ ಸಿ ಎ ಎಸ್ ಎಸ್ ನಾಯಕ್ ಅತಿಥಿಗಳನ್ನು ಸ್ವಾಗತಿಸುತ್ತಾ ಈ ಬೂಟ್ ಕ್ಯಾಂಪ್ ಅನೇಕ ನವೋದ್ಯಮಗಳು ಆರಂಭಿಸಲು ಉತ್ಸಾಹ ನೀಡಿದೆ. 2 ದಿನಗಳಲ್ಲಿ8 ವಿವಿಧ ವಿಷಯಗಳಾದ ಹೊಸ ಉದ್ಯಮಿಗಳ ಸೃಷ್ಟಿ ಮತ್ತು ಅಭಿವೃದ್ಧಿಗಾಗಿ ಮಾರ್ಗಸೂಚಿ, ನವೋದ್ಯಮಗಳಿಗೆ ಇನ್‌ಕ್ಯುಬೇಶನ್ ಬೆಂಬಲ, ಆರಂಭಿಕ ಉದ್ಯಮಗಳಿಗೆ ಹಣಕಾಸು ಆಯ್ಕೆಗಳು, MSME ಯೋಜನೆಗಳು ಮತ್ತು ಸಬ್ಸಿಡಿಗಳಿಗೆ ಹಣಕಾಸು ಆಯ್ಕೆಗಳು, ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಬೆಂಬಲ ಮತ್ತು ಮೀನು ಉತ್ಪನ್ನಗಳಲ್ಲಿ ಮೌಲ್ಯವರ್ಧನೆಗಾಗಿ ಘಟಕಗಳ ಸ್ಥಾಪನೆ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್, ಸಿಬಿಲ್ ಸ್ಕೋರ್, ಉದ್ಯಮಿಗಳು ಮತ್ತು ನವೋದ್ಯಮಗಳ ಸವಾಲುಗಳ ಕುರಿತು ಉಪನ್ಯಾಸ ಚರ್ಚೆ ಮತ್ತು ಪ್ರಶ್ನೋತ್ತರಗಳು ನೆರವೇರಿದವು.

“ಶತೇಶು ಜಾಯತೇ ಶೂರಃ ಸಹಸ್ರೇಷು ಚ ಪಂಡಿತಃ ವಕ್ತಾ ದಶಸಹಸ್ರೇಷು ಯಶಸ್ವಿ ಉದ್ಯಮಿ ಭವತಿ ವಾನವಾ “ ಎಂಬ ಸಂಸ್ಕ್ರತ ಸುಭಾಷಿತದಂತೆ ಪ್ರಸ್ತುತ ಸನ್ನಿವೇಶದಲ್ಲಿ ಯಶಸ್ವಿ ಉದ್ಯಮಿಗಳು ವಿರಳವಾದರೂ ಇತ್ತೀಚಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸ್ಟಾರ್ಟ್ ಅಪ್, MSME , ಬ್ಯಾಂಕಿಂಗ್ ಹಾಗೂ ತೆರಿಗೆ ವ್ಯವಸ್ಥೆಗಳು ಉದ್ಯಮ ಪ್ರಾರಂಭಿಸಲು ಪೂರಕವಾಗಿವೆ.
ಮುಖ್ಯ ಅತಿಥಿಗಳಾದ ಶ್ರೀ ಪಿ ಬಿ ಅಹ್ಮದ್ ಮುದಸ್ಸಿರ್, ಕೆಸಿಸಿಐ, ಮಂಗಳೂರು ಈ ಸಂಸ್ಥೆಯು ಕಳೆದ 84 ವರ್ಷಗಳಿಂದ ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ . ಇನ್ನು ಮುಂದೆಯೂ ಅನೇಕ ಪ್ರೋತ್ಸಾಹಗಳನ್ನು ನೀಡಲು ಬದ್ಧರಿದ್ದೇವೆ ಎಂದು ಉಚ್ಚರಿಸಿದರು.
ಕೆನರಾ ಬ್ಯಾಂಕ್, ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಶ್ರೀ ಮಂಜುನಾಥ್ ಬಿ ಸಿಂಘೈ ರವರು ತಮ್ಮ ಬ್ಯಾಂಕ್ ನಿಂದ ಯಾವುದೇ ಉದ್ಯಮಿ ಗಳಿಗೆ ಯಾವುದೇ ಸಹಕಾರ ನೀಡುವಲ್ಲಿ ನಾವು ಸಿದ್ದರಿದ್ದೇವೆ ಎಂದು ಹೇಳಿದರು.
ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಶ್ರೀ ನಿರಂಜನ್ ಕುಮಾರ್ ರವರು MSME ಗಳಿಗೆ ಹಾಗೂ ಸ್ಟಾರ್ಟ್ ಗಳಿಗೆ ತಮ್ಮ ಬ್ಯಾಂಕ್ ನ ಅನೇಕ ಸಲ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಸುದ್ದಿ ಮಾಹಿತಿ ಟ್ರಸ್ಟ್ ನ ಡಾ ಶಿವಾನಂದ ಯು ಪಿ, ಕು ಸಿಂಚನ, AIC ನಿಟ್ಟೆ ಯ ಶ್ರೀ ಪುನೀತ್ ರೈ ಹಾಗೂ ಶ್ರೀ ಧೀರಜ್, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ಡಾ ಶ್ರೀ ರಾಘವೇಂದ್ರ ಹೊಳ್ಳ, ರೋಟರಿ ಕ್ಲಬ್ ಅಪ್ ಮಂಗಳೂರು ಸೆಂಟ್ರಲ್ ನ ಪಿಡಿಜಿ ಡಾ. ದೇವದಾಸ್ ರೈ, ಅಧ್ಯಕ್ಷರು ರೋ ಭಾಸ್ಕರ್ ರೈ ಕಟ್ಟಾ, ಕಾರ್ಯದರ್ಶಿ ರೋ ವಿಕಾಸ್ ಕೋಟಿಯಾನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ನಿರ್ದೇಶಕ ಸಿ ಎ ಎಸ್ ಎಸ್ ನಾಯಕ್ ಹಾಗೂ NIPE ಪ್ರಿನ್ಸಿಪಾಲ್ ಡಾ ಜ್ಞಾನೇಶ್ವರ್ ಪೈ ಮಾರೂರು ಇವರನ್ನು ಸನ್ಮಾನಿಸಲಾಯಿತು. ಹಲವು ಶಿಬಿರಾರ್ಥಿ ಗಳಾದ ಉದ್ಯಮಿಗಳು, ನವೋದ್ಯಮಗಳು, ಶಿಕ್ಷಣ ತಜ್ಞರು ಮತ್ತು ಉದ್ಯಮಶೀಲತಾ ಕನಸುಗಳನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಕ್ರಿಯೆಯನ್ನು ತಿಳಿಸುತ್ತ ಅಧಿವೇಶನಗಳ ಪರಿಣಾಮ ಮತ್ತು ಪ್ರಸ್ತುತತೆಯನ್ನು ಶ್ಲಾಘಿಸಿದರು. ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಶ್ರೀ ಸಿ ಎ ಎಸ್ ಎಸ್ ನಾಯಕ್, CA ಪ್ರತೀಕ್ಷಾ ಪೈ , ಸಿ ಎ ಸಂಕೇತ್ ಎಸ್ ನಾಯಕ್ , ಶ್ರೀ ವಸಂತ ಶೆಟ್ಟಿ , ಶ್ರೀ ಸತೀಶ್ ಮಾಬೆನ್, ಡಾ ಮಂಜಾ ನಾಯಕ್ , ಕು ಆಂಡ್ರಿಯಾ ಗೊನ್ಸಾಲ್ವಿಸ್, ಡಾ ಎ ಪಿ ಆಚಾರ್ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಉದ್ಯಮಶೀಲತೆಯ ವಿವಿಧ ವಿಷಯಗಳಲ್ಲಿ ತಮ್ಮ ಅಪಾರ ಜ್ಞಾನವನ್ನು ಉಪನ್ಯಾಸದ ಮೂಲಕ ಶಿಬಿರಾರ್ಥಿಗಳಿಗೆ ತಿಳಿಸಿದರು. ಡಾ ಪ್ರದೀಪ್ ಕೆ ಎಸ್ ಅವರು ಧನ್ಯವಾದ ಅರ್ಪಿಸಿದರು. ಕು . ದೀಕ್ಷಾ ರೈ, ಕು. ನೇಹಾ ನಾಯಕ್, ಕು. ಇನ್ಶಾ ಹಾಗೂ ಕು. ಉರ್ವಿ ಪ್ರಭು ಇವರು ಜಂಟಿಯಾಗಿ ಕಾರ್ಯಕ್ರಮದ ನಿರೂಪಣೆಗೈದರು.

