ಇತ್ತೀಚೆಗೆ ಡೈಲಿ ಹಂಟ್ ನ್ಯೂಸ್ ಪೋರ್ಟಲ್, ಮೆಗಾ ಮೀಡಿಯಾ ಯೂಟ್ಯೂಬ್ ಚಾನೆಲ್, ಮೆಗಾ ಮೀಡೀಯಾ ಟಿ.ವಿ 24X7 ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆಯ ಬಗ್ಗೆ ಹರಡಲಾಗುತ್ತಿರುವ ಕೆಲವು ಸುದ್ದಿಗಳು ಕಪ್ಪು ಮತ್ತು ವಿಶ್ವಾಸನೀಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. (links https://youtu.be/IvVUFqSEx9M?si=bIOjnBTZSXinggml, https://dhunt.in/12f9LQ).
ಸುದ್ದಿಗಳ ಪ್ರಕಾರ ಶ್ರೀ ರಘುನಾಥ ಗಟ್ಟಿ ಅವರನ್ನು 19 ಅಕ್ಟೋಬರ್ 2025ರಂದು ಆಸ್ಪತ್ರೆಯಲ್ಲಿ ಮೃತ ಎಂದು ಘೋಷಿಸಿ, ಫ್ರೀಜರಿನಲ್ಲಿ ಇಟ್ಟು ನಂತರ ಅಂತ್ಯಸಂಸ್ಕಾರದ ವೇಳೆ ಜೀವಂತರಾಗಿದ್ದರು ಎಂದು ಈ ಮುಂದೆ ಉಲ್ಲೇಖಿಸಿದ ಮಾಧ್ಯಮಗಳು ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ.
ಘಟನೆಯ ವಾಸ್ತವತೆ ರೋಗಿ ಶ್ರೀ ರಾಮನಾಥ ಗಟ್ಟಿ, ಕಾಸರಗೋಡಿನ ಕುಂಬ್ಳೆ ಕಂಚಿಕಟ್ಟೆ ರಾಮನಗರ ನಿವಾಸಿ ಕರಿಯಪ್ಪ ಗಟ್ಟಿಯವರ ಮಗ, 14 ಅಕ್ಟೋಬರ್ 2025 ರಂದು 559 ಕ್ಕೆ ದೇರಳಕಟ್ಟೆ ಮಂಗಳೂರು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೈ ಕಾಲುಗಳ ಬಲಹೀನತೆ ಮತ್ತು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ದಾಖಲಾದರು.
ರೋಗಿಗೆ ಕೃತಕ ಉಸಿರಾಟದ ಬೆಂಬಲ ಮತ್ತು ಅಗತ್ಯವಿರುವ ಚಿಕಿತ್ಸೆ, ಔಷಧಿ, ಆರೈಕೆ ನೀಡಲಾಗಿತ್ತು. 19 ಅಕ್ಟೋಬರ್ 2025ರಂದು ರೋಗಿಯ ಸಂಬಂಧಿಕರು ವೈದ್ಯರ ಸಲಹೆಗೆ ವಿರುದ್ಧವಾಗಿ ಅವರನ್ನು ಕರೆದೊಯ್ಯಲು ಬಯಸಿದರು. ರೋಗಿಗೆ ನಿರಂತರ ಚಿಕಿತ್ಸೆ ಅಗತ್ಯವಿರುವ ಬಗ್ಗೆ ವೈದ್ಯರು ಮತ್ತೆ ಮತ್ತೆ ವಿವರಿಸಿದರೂ ಸಂಬಂಧಿಕರು ವೈದ್ಯರ ಸಲಹೆಗೆ ವಿರುದ್ಧವಾಗಿ ಡಿಸ್ಮಾರ್ಜ ಫಾರ್ಮ ಮೇಲೆ ಸಹಿ ಮಾಡಿ, ರೋಗಿಯನ್ನು ಬಾಡಿಗೆ ಅಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು. ರೋಗಿ ಡಿಸ್ಟಾರ್ಜ ಸಮಯದಲ್ಲಿ ಜೀವಂತವಾಗಿದ್ದರು ಮತ್ತು ಇದು ಸಂಬಂಧಿಕರಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ರೋಗಿಯ ಶ್ವಾಸೋಪಚಾರವನ್ನು ನಿರಂತರವಾಗಿ ಸಹಾಯ ಮಾಡಲು ಆಕ್ಸಿಜನ್ ಮಾಸ್ಕ್ ಒದಗಿಸಲಾಗಿತ್ತು,
ರೋಗಿಯನ್ನು ಫ್ರೀಜರಿನಲ್ಲಿ ಇಟ್ಟಿದ್ದರು ಅಥವಾ ಅವರು ಆಸ್ಪತ್ರೆಯಲ್ಲಿ ಮರಣಶೀಲರಾಗಿದ್ದರು ಎಂಬ ರೀತಿಯ ಸುಳ್ಳು ಹಾಗೂ ವಾಸ್ತವಣೆಯಿಂದ ದೂರವಾಗಿವೆ. ಆಸ್ಪತ್ರೆಯಿಂದ ಆಕ್ಸಿಜನ್ ಆಂಬ್ಯುಲೆನ್ಸ್‌ನಲ್ಲಿ ಹೋಗುವಾಗ ಅವರು ಜೀವಂತವಾಗಿದ್ದರು. ಇದು ರೋಗಿಯ ಸಂಬಂಧಿಕರಿಗೆ ತಿಳಿದಿತ್ತು.
ಇಂತಹ ಸುಳ್ಳು ಸುದ್ದಿಯ ಹರಡುವಿಕೆಯು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಖ್ಯಾತಿ, ಗೌರವ ಮತ್ತು ಪ್ರತಿಷ್ಠೆಗೆ ಹಾನಿ ಉಂಟು ಮಾಡಿದೆ. ‘ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪರಿಶೀಲನೆಗೊಳಗಾಗದ, ತಪ್ಪು ಹಾಗು ಭ್ರಮ ಉಂಟುಮಾಡುವ ಮಾಹಿತಿ ಹರಡುವಿಕೆಯನ್ನು ತೀವ್ರವಾಗಿ ಖಂಡಿಸುತ್ತಿದೆ. ಇಂತಹ ಸುಳ್ಳು ಸುದ್ದಿಗಳು ನಮ್ಮ ಸಂಸ್ಥೆಯ ಗೌರವ ಮತ್ತು ಕಾರ್ಯತಕ್ಷತೆಯನ್ನು ತೀವ್ರವಾಗಿ ಹಾನಿಗೊಳಿಸುತ್ತಿದೆ.
ನಾವು ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಂದು ಮನವಿ ಮಾಡುವುದೇನೆಂದರೆ. ಆರೋಗ್ಯ ಸಂಸ್ಥೆಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಸುದ್ದಿ ಹಂಚುವ ಮೊದಲು ವಾಸ್ತವತೆಯನ್ನು ಧೃಢವಾಗಿ ಪರಿಶೀಲಿಸಿ.

