Bengaluru 22°C
Ad

ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ

ಕೇಂದ್ರ ಲೋಕಸೇವಾ ಆಯೋಗ 2024ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ 2024ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.

Ad
300x250 2

ನಾಗರಿಕ ಸೇವೆಗಳ  ಪರೀಕ್ಷೆಗೆ ಹಾಜರಾಗಿರುವ ಆಕಾಂಕ್ಷಿಗಳು UPSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಜೂನ್ 16 ರಂದು ಭಾರತದಾದ್ಯಂತ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.

ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಆದಾಗ್ಯೂ ಅವರು 2024 ರ ನಾಗರಿಕ ಸೇವೆಗಳ ಪರೀಕ್ಷೆಗಾಗಿ ವಿವರವಾದ ಅರ್ಜಿ ನಮೂನೆ-I (DAF-I) ಅನ್ನು ಭರ್ತಿ ಮಾಡಬೇಕು. ಇ

ಫಲಿತಾಂಶ ಪರಿಶೀಲಿಸುವ ಹಂತಗಳು:
ಯುಪಿಎಸ್ಸಿಯ ಅಧಿಕೃತ ವೆಬ್​ಸೈಟ್ www.upsc.gov.in ಗೆ ಭೇಟಿ ನೀಡಿ. ಮುಖಪುಟದಲ್ಲಿ UPSC ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ. ಬಳಿಕ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದಾಗ ಹೊಸ ಪುಟ ತೆರೆಯುತ್ತದೆ. ಇಲ್ಲಿ “ಸಲ್ಲಿಸು” ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಫಲಿತಾಂಶಗಳು ಕಾಣುತ್ತದೆ. ನಂತರ ಡೌನ್ ಲೋಡ್ ಮಾಡಿ. ನಿಮ್ಮ ಭವಿಷ್ಯದ ಅಗತ್ಯಗಳಿಗಾಗಿ ಕಾಪಿಯನ್ನು ಸೇವ್ ಮಾಡಿಟ್ಟುಕೊಳ್ಳಿ.

2024 ರ ಸಿಎಸ್ (ಪಿ) ಪರೀಕ್ಷೆಯ ಅಂಕಗಳು, ಕಟ್-ಆಫ್ ಅಂಕಗಳು ಮತ್ತು ಉತ್ತರ ಕೀಗಳನ್ನು ನಾಗರಿಕ ಸೇವೆಗಳ ಪರೀಕ್ಷೆ ಪೂರ್ಣಗೊಂಡ ನಂತರ ಮತ್ತು ಅಂತಿಮ ಫಲಿತಾಂಶಗಳ ಪ್ರಕಟಣೆಯ ನಂತರ ವೆಬ್​ಸೈಟ್​ನಲ್ಲಿ ಪೋಸ್ಟ್​​ ಮಾಡಲಾಗುತ್ತದೆ.

Ad
Ad
Nk Channel Final 21 09 2023
Ad