ಯಾವುದೇ ವೃತ್ತಿಶಿಕ್ಷಣದ ಮೂಲ ಉದ್ದೇಶವೇ ಸ್ವಾವಲಂಬನೆ, ಜೀವನ ನಿರ್ವಹಣೆಗೆ ಸ್ವಂತ ಗಳಿಕೆ. ಇಂದಿನ ಆಧುನಿಕ ಜಗತ್ತಿನಲ್ಲಿ ಹಲವು ಆಯಾಮಗಳಲ್ಲಿ ಉನ್ನತ ಗಳಿಕೆ ಪಡೆಯಲು ವಿಪುಲ ಅವಕಾಶ ನೀಡುವ, ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸೆಗಳ ಸಂಯುಕ್ತ ವೈದ್ಯಕೀಯ ಪದವಿಯೇ BNYS.

ಇದು ಒಟ್ಟು ಐದೂವರೆ ವರ್ಷಗಳ ಪದವಿಯಾಗಿದ್ದು 4.5 ವರ್ಷ ಕಲಿಕೆ ಮತ್ತು 1 ವರ್ಷ ಇಂಟರ್ನ್ಶಿಪ್ ಒಳಗೊಂಡಿದೆ. ಪದವಿಗೆ ಪ್ರವೇಶ ಪಡೆಯಲು ಪಿಯುಸಿಯಲ್ಲಿ PCB 45% ಪ್ರತಿಶತ ಅಂಕ ಅವಶ್ಯ. ಸದ್ಯಕ್ಕೆ ನೀಟ್ ಖಡ್ಡಾಯವಿಲ್ಲ ಆದರೆ ಕನಿಷ್ಟ ಶುಲ್ಕದ  ಸೀಟ್ ಗಳಿಸಲು ಸಿಇಟಿ  ಮೂಲಕ ದಾಖಲಾತಿ ಪಡೆಯಲು ಅವಕಾಶವಿದೆ. ಆದರೆ ಹೆಚ್ಚಿನ ಜನರಿಗೆ ಮಾಹಿತಿಯ ಕೊರತೆಯಿದ್ದು ಕೋರ್ಸ್ನಿಂದ ದೊರೆಯುವ ಉದ್ಯೋಗದ ಅವಕಾಶಗಳನ್ನು ಇಲ್ಲಿ ವಿವರವಾಗಿ ತಿಳಿಸುತ್ತೇವೆ.

 ವೈದ್ಯಕೀಯ:

-ಸರಕಾರಿ ಆಯುಷ್ ಇಲಾಖೆಯಲ್ಲಿ ಪ್ರಕೃತಿ ಚಿಕಿತ್ಸಾ ವೈದ್ಯರಾಗಿ ವೃತ್ತಿ ಆರಂಭಿಸಬಹುದು.

-ಸ್ವಂತ ಕ್ಲಿನಿಕ್ಗಳಲ್ಲಿ ಅವರವರ ಆಯ್ಕೆಯಂತೆ ಯೋಗ ಥೆರಪಿ ಕ್ಲಿನಿಕ್, ಆಕ್ಯುಪಂಚರ್ ಕ್ಲಿನಿಕ್, ಆಹಾರ ಪದ್ಧತಿ ತಿಳಿಸಿಕೊಡುವ ಡಯಟ್ ಕ್ಲಿನಿಕ್, ಫಿಜಿಯೋಥೆರಪಿ, ಫಿಟ್ನೆಸ್ ಕ್ಲಿನಿಕ್ಗಳನ್ನು ಆರಂಭಿಸಬಹುದು.

– ಆಧುನಿಕ ಆಸ್ಪತ್ರೆಗಳಲ್ಲಿ ಡ್ಯೂಟಿ ಡಾಕ್ಟರ್ಗಳಾಗಿಯೂ ಕಾರ್ಯ ನಿರ್ವಹಿಸಬಹುದು.

 

ಉನ್ನತ ಶಿಕ್ಷಣ:

– BNYS ಪದವಿಯನ್ನು MD ಯೋಗ/ಪ್ರಕೃತಿ ಚಿಕಿತ್ಸೆ/ ನ್ಯೂಟ್ರಿಶನ್ & ಡಯಟಿಟಿಕ್ಸ್/ ಆಕ್ಯುಪಂಚರ್ ನಾಲ್ಕು ವಿಭಾಗಗಳಲ್ಲಿ ಪಡೆಯಬಹುದು. PhDಗೂ ಅವಕಾಶವಿದೆ. ರಾಜ್ಯ/ಕೇಂದ್ರೀಯ ಸರಕಾರಿ ಉದ್ಯೋಗಗಳಲ್ಲಿ MD ಪದವಿಗೆ ಪ್ರಥಮ ಆದ್ಯತೆಯಾಗಿದೆ.

– MSc – Anatomy , Physiology, Biochemistry, Microbiology ಕಲಿಯಲು ಅವಕಾಶಗಳದ್ದು Allied Sciences, ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿಬಹುದು.

– MSc – Clinical  Nutrition, Psychology ಮಾಡಲು ಅವಕಾಶವಿದ್ದು ಕ್ಲಿನಿಕ್ ನಡೆಸಲು ಪೂರಕ ಜ್ಞಾನ ಪಡೆಯಲು ಸಹಾಯಕಾರಿ.

 

ಸಂಶೋಧನೆ :

– ರಿಸರ್ಚ್ ಅನ್ನುವುದು BNYS ಪದವಿಯಲ್ಲಿ ಒಂದು ಪ್ರಮುಖ ವಿಷಯವಾಗಿದೆ. ಹಾಗಾಗಿ NIMHANS, AIIMS ಮುಂತಾದ ಕೇಂದ್ರೀಯ ಸಂಸ್ಥೆಗಳಲ್ಲಿ ಆಯುಷ್ ವಿಭಾಗದಲ್ಲಿ ಸಂಶೋಧನಾ ಅಧಿಕಾರಿಯಾಗಲು ಅವಕಾಶವಿದೆ.

– ಕೇಂದ್ರ ಸರಕಾರದ ಆಯುಷ್ ವಿಭಾಗಗಳಾದ Central Council for Research in Yoga & Naturopathy, National Institute of Naturopathy, Morarji Desai National Institute of Yoga ಇವುಗಳಲ್ಲೂ ಸಂಶೋಧನಾ ಅಧಿಕಾರಿಯಾಗಿ ಉದ್ಯೋಗ ಗಳಿಸಬಹುದು.

– MSc- Clinical  Research ಉನ್ನತ ಪದವಿ ಮುಗಿಸಿಕೊಂಡು ಔಷಧ ಸಂಶೋಧನಾ ಕಂಪನಿಗಳಲ್ಲಿ ಉದ್ಯೋಗ ಗಳಿಸಬಹುದು.

 

ಸ್ಪಾ ಮತ್ತು ವೆಲ್ನೆಸ್:

– ಸ್ಪಾ/ ರೆಸಾರ್ಟ್/ ವೆಲ್ನೆಸ್ ಸೆಂಟರ್ಗಳಲ್ಲಿ ದೇಶ- ವಿದೇಶಗಳಲ್ಲಿ ಉದ್ಯೋಗ ಆರಂಭಿಸಲು ಸುಲಭ ಸಾಧ್ಯ.

– ಕ್ರೂಜ್ ಶಿಪ್(Cruize Ship)ಗಳಲ್ಲಿ ಆಕ್ಯುಪಂಚರ್ಗೆ ಬಹಳ ಬೇಡಿಕೆಯಿದ್ದು 7 ತಿಂಗಳ ಒಂದು ಬಾರಿಯ ಪ್ರೊಜೆಕ್ಟ್ಗೆ (ವಾರಕ್ಕೆ ಕನಿಷ್ಟ 1 ಲಕ್ಷದಂತೆ ) ಅತೀ ಕಡಿಮೆಯೆಂದರೂ 28ರಿಂದ -30 ಲಕ್ಷ ಆರಂಭದಲ್ಲಿ ಗಳಿಸಬಹುದು.

 

ಆಡಳಿತಾತ್ಮಕ

– ಆಡಳಿತಾತ್ಮಕ ಉನ್ನತ ಶಿಕ್ಷಣಗಳಾಗಿ  MHA, MPH, MBA ಮುಗಿಸಿಕೊಂಡು ಉನ್ನತ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬಹುದು.

– IAS, KAS, UPSC ಓದಲು ಅವಕಾಶವಿದೆ.

 

ಯೆನೆಪೋಯದಲ್ಲಿ BNYS ಕೋರ್ಸ್ನ ವಿಶೇಷತೆಗಳು:

·       ಕನಿಷ್ಟ ಶಿಕ್ಷಣ ಶುಲ್ಕ

·       PUC ಯಲ್ಲಿ   90% ಗಿಂತ ಹೆಚ್ಚು ಅಂಕ ಗಳಿಸಿದ್ದವರಿಗೆ 25% ಶುಲ್ಕ ವಿನಾಯತಿ ಹಾಗೂ ಸ್ಕಾಲರ್ಶಿಪ್

·       ಶಿಕ್ಷಣ ಶುಲ್ಕ ಪಾವತಿಸಲು ಇಎಮ್ಐ ಸೌಲಭ್ಯ

·       ನುರಿತ ಶಿಕ್ಷಕರು ಮತ್ತು ಕಲಿಕೆಗೆ ಪೂರಕ ಸುಸಜ್ಜಿತ ಆಸ್ಪತ್ರೆ. ಜೊತೆಗೆ ಆಧುನಿಕ ಪದ್ದತಿ ಆಸ್ಪತ್ರೆಯಲ್ಲೂ ತರಬೇತಿ

·       ಕ್ಲಿನಿಕಲ್ ಅಭ್ಯಾಸಕ್ಕೆ ಪೂರಕ ವಿಶೇಷ ಕೋರ್ಸ್ಗಳು – ಕಪ್ಪಿಂಗ್ ಥೆರಪಿ, ಕೈರೋಪ್ರಾಕ್ಟಿಸ್, ಪ್ರಾಣ ಚಿಕಿತ್ಸೆ ಇತ್ಯಾದಿ

 

BNYS ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿಗೆ ನೇರವಾಗಿ ಸಂಪರ್ಕಿಸಬಹುದು.

ಡಾ. ಪುನೀತ್ ರಾಘವೇಂದ್ರ BNYS,MD Yoga

ಪ್ರಾಂಶುಪಾಲರು

ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ

ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು

9901722763