ಮಂಗಳೂರು: ಜೂನ್ 16 ರಿಂದ 18ರ ತನಕ, ಯೆನೆಪೋಯಾ ನೈತಿಕತೆ ಕೇಂದ್ರ (Centre for Ethics, Yenepoya Deemed to be University) ದ “ಕೃತಕ ಬುದ್ಧಿಮತ್ತೆ (AI) ಮತ್ತು ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ” ವಿಷಯದ ಕುರಿತ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು NIH (Grant No. 1R25TW010305), ಇದರ ಸಹಕಾರದಿಂದ ನಡೆಸಲಾಯಿತು.

ಮುಖ್ಯ ಸಂಪನ್ಮೂಲ ವ್ಯಕ್ತಿ ಅಂತರಾಷ್ಟ್ರೀಯ ಫ್ಯಾಕಲ್ಟಿ, ಪ್ರೊ. ಬರ್ಟ್ ಗೋರ್ಡಿಜ್, ಪ್ರೊಫೆಸರ್ ಮತ್ತು ನಿರ್ದೇಶಕರು, ಎಥಿಕ್ಸ್ ಸಂಸ್ಥೆ, ಡಬ್ಲಿನ್ ಸಿಟಿ ವಿಶ್ವವಿದ್ಯಾಲಯ, ಐರ್ಲೆಂಡ್. ಹೆಚ್ಚುವರಿಯಾಗಿ ಡಾ. ವಿನಾ ವಾಸ್ವಾನಿ, ನಿರ್ದೇಶಕರು, ಎಥಿಕ್ಸ್ ಮತ್ತು ಶ್ರೀ ಅಕುಮಾ ಇಫಿಯಾನಿಚುಕ್ವು, SRF, ಎಥಿಕ್ಸ್ ಸೆಂಟರ್ ಸಹ ಅಧಿವೇಶನಗಳನ್ನೂ ತೆಗೆದುಕೊಂಡರು. ಕಾರ್ಯಾಗಾರವನ್ನು ಯೆನೆಪೋಯಾ ಡೆಂಟಲ್ ಕಾಲೇಜಿನ ಪ್ರಿನ್ಸಿಪಲ್ ಡಾ. ಲಕ್ಷ್ಮಿಕಾಂತ್ ಚಾತ್ರ (Dr Lakshmikanth Chatra (Principal, Yenepoya Dental College, Mangalore) ಉದ್ಘಾಟಿಸಿದರು.

ಕಾರ್ಯಾಗಾರದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕತೆ, ಪ್ರಕಾಶನಗಳಲ್ಲಿ AI ನ ಬಳಕೆ, ಡಿಮೆನ್ಶಿಯಾ ಕಾಳಜಿ ಮತ್ತು ಸಂಶೋಧನೆಯ ಕುರಿತಂತೆ ವಿಭಿನ್ನ ವಿಷಯಗಳನ್ನು ಚರ್ಚಿಸಲಾಯಿತು. ಈ ವಿಷಯಗಳಿಗೆ ಸಂಬಂಧಿಸಿದ ಡಾಕ್ಯುಮೆಂಟರಿಗಳನ್ನೂ ಪ್ರದರ್ಶಿಸಲಾಯಿತು. ಈ ಕಾರ್ಯಾಗಾರವು ಹೈಬ್ರಿಡ್ ಮಾದರಿಯಲ್ಲಿ (ಆನ್‌ಲೈನ್ ಮತ್ತು ಆಫ್‌ಲೈನ್) ನಡೆಸಲ್ಪಟ್ಟಿತು.

ಹದಿನಾರು ಮಂದಿ ಭಾಗವಹಿಸಿದ ಈ ಕಾರ್ಯಾಗಾರದಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಸಹಯೋಗ ಸಂಸ್ಥೆಗಳಿಂದ ಬಂದ ವಿವಿಧ ಶಾಖೆಗಳ ಭಾಗವಹಿಸುವವರು ಪ್ರಯೋಜನ ಪಡೆದರು. ವಿಷಯಗಳ ಕುರಿತು ಸಂಶಯ ಪರಿಹಾರ ಸೇಶನ್‌ಗಳು ಹಾಗೂ ಕೇಸ್ ಸ್ಟಡಿಗಳ ಗುಂಪು ಚರ್ಚೆಗಳು ವಿಶೇಷವಾಗಿ ಭಾಗವಹಿಸುವವರಿಂದ ಮೆಚ್ಚುಗೆ ಗಳಿಸಿತು.

ಕಾರ್ಯಕ್ರಮವು ಸಂಪನ್ಮೂಲ ವ್ಯಕ್ತಿ ಮತ್ತು ಪ್ರತಿನಿಧಿಗಳಿಗೆ ಧನ್ಯವಾದ ಸಮರ್ಪಣೆ ಮತ್ತು ಮೆಚ್ಚುಗೆಯ ಪ್ರಮಾಣಪತ್ರ ವಿತರಣೆಯೊಂದಿಗೆ ಮತ್ತು ಗುಂಪು ಛಾಯಾಚಿತ್ರದೊಂದಿಗೆ ಮುಕ್ತಾಯವಾಯಿತು.