ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ವಿವಿಧ ಕ್ಷೇತ್ರದಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ – 588, ಉದ್ಯೋಗ ಸ್ಥಳ – ಮಹಾರಾಷ್ಟ್ರ. ಹುದ್ದೆಗಳ ವಿವರ,- ಪೇಂಟರ್, ಮಷಿನ್ ಆಪರೇಟರ್, ಬಡಗಿ, ಶೀಟ್ ಮೆಟಲ್ ವರ್ಕರ್, ಕೋಪಾ, ವೆಲ್ಡರ್, ಸ್ಟೆನೋಗ್ರಾಫರ್, ಫುಡ್ , ಎಂಜಿನಿಯರ್, ಫಿಟ್ಟರ್, ಟೂಲ್ ಮತ್ತು ಡೈಮೇಕಿಂಗ್, ಟರ್ನರ್, ಯಂತ್ರಶಿಲ್ಪಿ, ಎಲೆಕ್ಟ್ರಿಷಿಯನ್, ಡ್ರಾಫ್ಟ್ ಮೆನ್, ಇತ್ಯಾದಿ
ಶೈಕ್ಷಣಿಕ ಅರ್ಹತೆ – ಪದವಿ, ಡಿಪ್ಲೊಮೊ, ಐಟಿಐ, ಬಿಇ, ಬಿಟೆಕ್, ಬಿಎ, ಬಿಎಸ್‌ಸಿ, ಬಿಕಾಂ ಇತ್ಯಾದಿ ತತ್ಸಮಾನ ಅರ್ಹತೆ. ಸ್ಟೈಪಂಡ್ – ಎಂಜಿನಿಯರಿಂಗ್ ಅಪ್ರೆಂಟಿಸ್ – 9000 ರೂ. ಡಿಪ್ಲೋಮೋ ಅಪ್ರೆಂಟಿಸ್ – 8000 ರೂ. , ತಾಂತ್ರಿಕೇತರ ಪದವೀಧರರು – 9000 ರೂ., ಐಟಿಐ ಟ್ರೇಡ್ ಅಪ್ರೆಂಟಿಸ್ – 7700 ರೂ-8050 ರೂ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆ. 2 2025. ವೆಬ್‌ಸೈಟ್ http://Hal-inida.co.in. ಅರ್ಜಿ ಶುಲ್ಕ – ಉಚಿತ.

