ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ (AFMS) ನಲ್ಲಿ 225 ವೈದ್ಯರ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಹೆಸರು – ವೈದ್ಯಕೀಯ ಅಧಿಕಾರಿಗಳು, ಒಟ್ಟು ಖಾಲಿ ಹುದ್ದೆಗಳ ಸಂಖೆಯ – 225, ಉದ್ಯೋಗ ಸ್ಥಳ – ಭಾರತಾದ್ಯಂತ ಯಾವುದೇ ರಾಜ್ಯ, ವಯೋಮಿತಿ – ಗರಿಷ್ಠ 30 ವರ್ಷಗಳು, ಶೈಕ್ಷಣಿಕ ಅರ್ಹತೆ – ಯಾವುದೇ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್‌.

ಆಯ್ಕೆ ವಿಧಾನ – ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ – ಆನ್‌ಲೈನ್‌ ಮೂಲಕ, ವೆಬ್‌ ಸೈಟ್‌ ವಿಳಾಸ – https://www.afmcdg1d.gov.in/, ವೇತನ – ಎಎಫ್‌ಎಂಎಸ್‌ ಮಾನದಂಡಗಳಿಗೆ ಅನುಗುಣವಾಗಿ, ಅರ್ಜಿ ಸಲ್ಲಿಸಲು  ಅಕ್ಟೋಬರ್‌  3 ಕೊನೆಯ ದಿನವಾಗಿದೆ.