ಪ್ರತಿವರ್ಷ ಸಿಬ್ಬಂದಿ ನೇಮಕಾತಿ ಆಯೋಗ ಗಡಿ ಭದ್ರತಾ ಪಡೆ ಕಾನ್ಸ್‌ಟೇಬಲ್‌ ಮತ್ತು ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತದೆ. ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ಬಿಎಸ್‌ಎಫ್‌ ಕಾನ್ಸ್‌ಟೇಬಲ್‌, ಹೆಡ್‌ ಕಾನ್ಸ್‌ಟೇಬಲ್‌, ಎಸ್‌ಐ, ಎಎಸ್‌ಐ ಪೋಸ್ಟ್‌ಗಳ ಭರ್ತಿಗೆ ಈ ವರ್ಷ ಕೂಡ ಅರ್ಜಿ ಆಹ್ವಾನ ಮಾಡಲಾಗಿದೆ. ಎಸ್‌ಎಸ್‌ಸಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಿಎಸ್‌ಎಫ್‌ ಕಾನ್ಸ್‌ಟೇಬಲ್‌ ಪೋಸ್ಟ್‌ಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 – ಗರಿಷ್ಠ 25 ವರ್ಷ ಇರಬೇಕು. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ರಕ್ಷಣಾ ಸೇವೆ ಮಾಡಲು ಸಿದ್ಧರಾಗಿರಬೇಕು.

ವೇತನ ಶ್ರೇಣಿ ರೂ.21,700- 69,100 ರೂ. ಇರಲಿದೆ. ಹಾಗೆಯೇ ಬಿಎಸ್ಎಫ್‌ ಹೆಡ್‌ ಕಾನ್ಸ್‌ಟೇಬಲ್‌ ವೇತನ ಶ್ರೇಣಿ ಪೇ ಮೆಟ್ರಿಕ್ಸ್‌ ಲೆವೆಲ್ 4ರ ಪ್ರಕಾರ ರೂ.25,500- 81,100 ರೂ. ಇರಲಿದೆ. ಇದಕ್ಕೆ ನೀವು ಮಾಡಬೇಕಾದದ್ದು 2 ಪೇಪರ್​ ಲಿಖಿತ ಪರೀಕ್ಷೆ ಬರೆಯಬೇಕು ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಪೂರ್ಣಗೊಳಿಸಬೇಕು.