ಹುಬ್ಬಳ್ಳಿ: ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್​​​ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗಾಗಿ ಉದ್ಯೋಗ ಅವಕಾಶ ತೆರೆದಿಟ್ಟಿದೆ. ಖಾಲಿ ಇರುವ ಅಪ್ರೆಂಟಿಸ್​​ ಹುದ್ದೆಗಳಿಗಾಗಿ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ.

ಸಂಸ್ಥೆ ಹೆಸರು: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್​​​, ಪೋಸ್ಟ್​ ಹೆಸರು: ಅಪ್ರೆಂಟಿಸ್​​, ಪೋಸ್ಟ್​ಗಳ ಸಂಖ್ಯೆ: 338, ಉದ್ಯೋಗ ಸ್ಥಳ: ಹುಬ್ಬಳ್ಳಿ ವೇತನ: 8000-9000 (ತಿಂಗಳು).

ವಿದ್ಯಾರ್ಹತೆ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್​​ ಹುದ್ದೆಗಳಿಗಾಗಿ ಉದ್ಯೋಗ ಆಕಾಂಕ್ಷಿಗಳನ್ನು ಆಹ್ವಾನಿಸಿದೆ. ಪದವೀಧರರ ಅಪ್ರೆಂಟಿಸ್​​​​ ಉದ್ಯೋಗ ಬಯಸುವ ಆಸಕ್ತರು ಎಲೆಕ್ಟ್ರಿಕ್​​ ಮತ್ತು ಎಲೆಕ್ಟ್ರಾನಿಕ್ಸ್​​ ಎಂಜಿನಿಯರಿಂಗ್​​ನಲ್ಲಿ ಬಿಇ ಅಥವಾ ಬಿ.ಟೆಕ್​ ಮಾಡಿರಬೇಕು. ಡಿಪ್ಲೊಮಾ ಅಪ್ರೆಂಟಿಸ್​​​ ಹುದ್ದೆಗಾಗಿ ಎಲೆಕ್ಟ್ರಿಕ್​​ ಮತ್ತು ಎಲೆಕ್ಟ್ರಾನಿಕ್ಸ್​​ ಎಂಜಿನಿಯರಿಂಗ್ ಮಾಡಿರಬೇಕು.

ವಯೋಮಿತಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ನೇಮಕಾತಿ ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.  ಮೆರಿಟ್​​ ಮತ್ತು ದಾಖಲೆ ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05/08/ 2024

ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/08/2024

ಅರ್ಜಿ ಸಲ್ಲಿಸುವ ಲಿಂಕ್​: https://nats.education.gov.in/

ಅಧಿಸೂಚನೆಯ ಪಿಡಿಎಫ್​: ಕ್ಲಿಕ್​ ಮಾಡಿ

ಅಧಿಕೃತ ವೆಬ್​ಸೈಟ್​: hescom.karnataka.gov.in