ಪುತ್ತೂರು: ಸಿ ಬಿ ಎಸ್ ಇ ನಡೆಸಿದ 2024- 25 ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿದ್ದು ಪುತ್ತೂರಿನ ಅಂಬಿಕಾ ವಿದ್ಯಾಲಯ ಸತತ ಮೂರನೆಯ ಬಾರಿ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.

ಈ ಪರೀಕ್ಷೆಯಲ್ಲಿ 48% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 52% ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕುಮಾರಿ ನಿಯತಿ ಭಟ್ (ಶ್ರೀ ಪ್ರವೀಣ ಡಿ ಮತ್ತು ಶ್ರೀಮತಿ ಚಿತ್ಕಲ ಗೌರಿ ಇವರ ಪುತ್ರಿ) 95.17% ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು, ಕುಮಾರಿ ಹಿತಾಲಿ ಪಿ ಶೆಟ್ಟಿ(ಶ್ರೀ ಪಿ ಎನ್ ಪ್ರಸನ್ನ ಕುಮಾರ್ ಶೆಟ್ಟಿ ಮತ್ತು ಶ್ರೀಮತಿ ಪ್ರತಿಮಾ ಪಿ ಶೆಟ್ಟಿ ಇವರ ಪುತ್ರಿ) 94.17 ಶೇಕಡಾ ದೊಂದಿಗೆ,

ದ್ವಿತೀಯ ಸ್ಥಾನವನ್ನು ಹಾಗೂ ಚಿರಂಜೀವಿ ಅದ್ವೈತ ಕೃಷ್ಣ ಬಿ (ಶ್ರೀ ಅನಂತನಾರಾಯಣ ಬಿ ಮತ್ತು ಶ್ರೀಮತಿ ಶಂಕರಿ ಬಿ ಇವರ ಪುತ್ರ) 94 ಶೇಕಡ ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.