ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪರವಾಗಿ, ಆಗಸ್ಟ್ 1 ಮತ್ತು 2 ರಂದು ನಡೆಯಲಿರುವ 15ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2025 ಉದ್ಯೋಗ ಮೇಳವನ್ನು ಘೋಷಿಸುತ್ತಿರುವೆವು. 2007ರಲ್ಲಿ ಪ್ರಾರಂಭವಾದ ಈ ಮೇಳ, ಸಾವಿರಾರು ಯುವಕರಿಗೆ ಉದ್ಯೋಗ ಅವಕಾಶ ಒದಗಿಸಿದೆ.
ಈ ಬಾರಿಯ ಮೇಳದಲ್ಲಿ ಈಗಾಗಲೇ 285 ಕಂಪೆನಿಗಳು ತಮ್ಮ ಹಾಜರಾತಿಯನ್ನು ದೃಢಪಡಿಸಿವೆ ಹಾಗೂ 15,930ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಲಭ್ಯವಿವೆ. ಇದು ವಿಕಸನಶೀಲ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗವನ್ನೀಡುವ ನಿಟ್ಟಿನಲ್ಲಿ ಮಹತ್ತ್ವದ ಹೆಜ್ಜೆಯಾಗಿದೆ.
ಮೇಳದ ಉದ್ಘಾಟನೆಯನ್ನು ಆಗಸ್ಟ್ 1 ರಂದು ಬೆಳಿಗ್ಗೆ 9:30ಕ್ಕೆ ವಿದ್ಯಾಗಿರಿಯಲ್ಲಿ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡು ರಾವ್ ನೆರವೇರಿಸಲಿದ್ದು, ಹಲವಾರು ಗಣ್ಯರು ಉಪಸ್ಥಿತರಿರುತ್ತಾರೆ.
ಈ ಸಂದರ್ಭದಲ್ಲಿ ಹಲವಾರು ಉದ್ಯಮಿಗಳಿಗೂ ಸನ್ಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ನಮ್ಮ ಅಧಿಕೃತ ವೆಬ್‌ಸೈಟ್ www.alvaspragati.com ಗೆ ಭೇಟಿ ನೀಡಬಹುದು. ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

