ಹೊಸದಿಲ್ಲಿ: ನೀಟ್-ಯುಜಿ ಮತ್ತು ಯುಜಿಸಿ ನೆಟ್ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದು ಸಿಬಿಐ ತನಿಖೆಗೆ ಆದೇಶವಾಗಿರುವ ನಡುವೆಯೇ ಅಂತಹ ತಪ್ಪುಗಳು ಪುನರಾವರ್ತನೆ ಆಗದಂತೆ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿ ಎಸ್‌ಸಿ) ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಪರೀಕ್ಷೆಯಲ್ಲಿ ಅಕ್ರಮ ಗಳಾಗುವುದನ್ನು ತಡೆಯಲು ಎಐಆಧಾರಿತ ಸಿಸಿಟಿವಿ, ಆಧಾರ್ ಆಧಾರಿತ ಬೆರಳಚ್ಚು ವ್ಯವಸ್ಥೆಯಂತಹ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.
ಯುಪಿಎಸ್‌ಸಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳಲು ಜೂ. 10ರಂದೇ ನಿರ್ದಿಷ್ಟ ಕಂಪೆನಿಗಳಿಂದ ಬಿಡ್ ಆಹ್ವಾನಿಸಿದೆ. ಇದರ ಮೂಲಕ ಸೇವಾ ಪರೀಕ್ಷೆಗಳನ್ನು ಯಾವುದೇ ತಪ್ಪಿಲ್ಲದೆ ನಡೆಸಲು ಸಜ್ಜಾಗಿದೆ.

