ಪುತ್ತೂರು: ಬೆಳಗಾವಿಯ ಸಂತ ಮೀರಾ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಭಾಗವಹಿಸಿ ದ್ವಿತೀಯ ಸ್ಥಾನಿಯಾಗಿರುತ್ತಾರೆ.
ಈ ತಂಡದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಮಂತ್ ಬಿ.ಎಲ್., ವಿಶ್ರುತ್. ಎನ್, ಲಿಖಿತ್. ಪಿ., ಜೀವನ್. ಕೆ, ರಿಕಿತ್. ಆರ್, ಚಿಂತನ್ ದೇವಯ್ಯ ಎನ್.ಜೆ, ಧನುಶ್‌ಕುಮಾರ್. ಜೆ.ವಿ , ಪುನೀತ್ ಪೊನ್ನಪ್ಪ, ದೀಕ್ಷಿತ್ ಎಸ್ .ಎಸ್, ಶರತ್. ಜೆ, ಹಾರ್ದಿಕ್ ಬಿ.ಆರ್, ಹಾಗೂ ಪ್ರಥಮ ಪಿಯುಸಿಯ ಶ್ರೇಯಸ್ ಶ್ರೀವತ್ಸ ಎಮ್. ಎಸ್, ನಿಶಾಂತ್. ಕೆ, ಎನ್.ಆರ್.ವಿವೇಕ್ ಸುಬ್ಬಯ್ಯ, ಅಕ್ಷಣ್ ಎಚ್. ಎಮ್, ಅಗತ್ಯ ಡಿ. ಭಾಗವಹಿಸಿದರು.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ. ಎಸ್., ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಉಪನ್ಯಾಸಕ ಉಪನ್ಯಾಸಕೇತರ ವರ್ಗದವರು ಅಭಿನಂದಿಸಿದ್ದಾರೆ.

