ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ನೀಡಿದರು. ಶಾಸಕ ಅರವಿಂದ ಬೆಲ್ಲದ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಕೇಂದ್ರ ಸಚಿವರ ಮನೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅದ್ದೂರಿಯಾಗಿ ಸ್ವಾಗತಿಸಿಲಾಯಿತು. ಅಲ್ಲದೇ ಕಾರ್ಯಕರ್ತರು ಕೂಡ ಶಾಲು ಹಾಕಿ ಸನ್ಮಾನಿಸಿ ಸ್ವಾಗತಿಸಿದರು.
ಇನ್ನೂ ಸಚಿವರ ನಿವಾಸದಲ್ಲಿಯೇ ಬಿ.ವೈ ವಿಜಯೇಂದ್ರ ಹಾಗೂ ಪ್ರಹ್ಲಾದ ಜೋಶಿಯವರು ಉಭಯ ಕುಶಲೋಪರಿಯ ಜೊತೆಗೆ ರಾಜಕೀಯ ಬೆಳವಣಿಗೆ ಮಾತು ನಡೆಸಿದರು ಎನ್ನಲಾಗುತ್ತಿದೆ.

